September 11, 2026
Friday, September 11, 2026
spot_img

ಎರಡು ವರ್ಷದಿಂದ ಕಾದರೂ ಹಳ್ಳಿಗೆ 5ಜಿ ನೆಟ್‌ವರ್ಕ್‌ ಬಂದಿಲ್ಲ : ಉದ್ಯೋಗಿಯನ್ನು ಟವರ್‌ ಕಂಬಕ್ಕೆ ಕಟ್ಟಿ ಹಾಕಿದ ಜನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎರಡು ವರ್ಷದಿಂದ ಕಾದರೂ ಹಳ್ಳಿಗೆ 5ಜಿ ನೆಟ್‌ವರ್ಕ್‌ ಬಂದಿಲ್ಲ ಎನ್ನುವ ಸಿಟ್ಟಿಗೆ ಹಳ್ಳಿಗರೆಲ್ಲ ಸೇರಿಕೊಂಡು ಉದ್ಯೋಗಿಯನ್ನು ಮೊಬೈಲ್‌ ಟವರ್‌ಗೆ ಕಟ್ಟಿಹಾಕಿರುವ ಘಟನೆ ಫತೇಪುರದ ಹರ್ದೌಲಿಯಲ್ಲಿ ನಡೆದಿದೆ.

ಎರಡು ವರ್ಷದ ಹಿಂದೆ ಹಳ್ಳಿಗೆ ಜಿಯೋ 5ಜಿ ನೆಟ್‌ವರ್ಕ್‌ ಬರುತ್ತದೆ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ನಿಗದಿತ ಸಮಯ ಆದ ನಂತರವೂ ಊರಿನಲ್ಲಿ ನೆಟ್‌ವರ್ಕ್‌ ಸಮಸ್ಯೆಯಾಗುತ್ತಿತ್ತು. ಇದರಿಂದ ಬೇಸತ್ತ ಜನ ಎಂಪ್ಲಾಯಿಯನ್ನು ಹಾಸ್ಟೇಜ್‌ ರೀತಿ ಇಟ್ಟುಕೊಂಡಿದ್ದಾರೆ.

ಟವರ್‌ಗೆ ಆತನನ್ನು ಹಗ್ಗದಿಂದ ಕಟ್ಟಿದ್ದಾರೆ. ನಮ್ಮ ಹಳ್ಳಿಗೆ 5ಜಿ ಬರುವವರೆಗೂ ಉದ್ಯೋಗಿಯನ್ನು ಬಿಡೋದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಬಹಳ ದಿನದ ಆಕ್ರೋಶವನ್ನು ಒಂದೇ ವ್ಯಕ್ತಿಯ ಮೇಲೆ ತೋರಿಸೋದು ಎಷ್ಟು ಸರಿ? ಆತ ಕಂಪನಿಯ ಬಾಸ್‌ ಅಲ್ಲ, ಆತನೂ ಉದ್ಯೋಗಿ ಎಂದು ನೆಟ್ಟಿಗರು ಹೇಳ್ತಿದ್ದಾರೆ.

ಎರಡು ವರ್ಷದಿಂದ ನಮಗೆ ಉತ್ತಮ ನೆಟ್‌ವರ್ಕ್‌ ಇಲ್ಲ. ಮಕ್ಕಳು ಓದಲು ಇಂಟರ್ನೆಟ್‌ ಬಳಸಲಾಗದೇ ಒದ್ದಾಡುತ್ತಾರೆ. ಪೇಮೆಂಟ್‌ ಮಾಡೋಕೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಕಂಪ್ಲೆಂಟ್‌ ಇದ್ದರೆ ಹಳ್ಳಿಯ ಜನರು ಆಫೀಸ್‌ಗೆ ಬಂದು ದೂರು ನೀಡಬೇಕು. ಆದರೆ ಅದನ್ನು ಬಿಟ್ಟು ಉದ್ಯೋಗಿಯನ್ನು ಹೀಗೆ ನಿರ್ದಯವಾಗಿ ಕಂಬಕ್ಕೆ ಕಟ್ಟಿ ಹಾಕಿರುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದ್ದು, ಪರ ವಿರೋಧ ಚರ್ಚೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !