ಬಾಯಲ್ಲಿ ನೀರೂರಿಸುವ ಒಣಮೆಣಸಿನಕಾಯಿ ಖಾರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಖಾರ ತಿನ್ನೋರಿಗೆ ಆಲ್‌ ಟೈಂ ಫೇವರಿಟ್..‌ ತಿಂತಾ ಇದ್ರೆ ಆಹಾ ಎನಿಸುವಷ್ಟು ರುಚಿ. ಚಳಿ, ಜ್ವರ ,ಶೀತ, ಕೆಮ್ಮು, ನಾಲಿಗೆ ರುಚಿ ಕೆಟ್ಟಿರುವವರಿಗೆ ಹೇಳಿ ಮಾಡಿಸಿದ ರೆಸಿಪಿ ಇದು. ಬಿಸಿ ಬಿಸಿ ಅನ್ನ-ತುಪ್ಪದೊಂದಿಗೆ ಈ ಖಾರ ಒಳ್ಳೆಯ ಕಾಂಬಿನೇಷನ್.‌ ರೊಟ್ಟಿ, ಚಪಾತಿ, ಮುದ್ದೆ ಎಲ್ಲದಕ್ಕೂ ಉಪಯೋಗ. ಅಷ್ಟೇ ಮಾಡುವುದಕ್ಕೂ ಸುಲಭ ಹಾಗಾದ್ರೆ ಒಮ್ಮೆ ಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು
ಒಣ ಮೆಣಸಿನಕಾಯಿ- ೧೦೦ ಗ್ರಾಂ
ಜೀರಿಗೆ- ಸ್ವಲ್ಪ
ಬೆಳ್ಳುಳ್ಳಿ- ೨
ಬೆಲ್ಲ-೧
ಹುಣುಸೆ ಹಣ್ಣು
ಉಪ್ಪು- ರುಚಿಗೆ ತಕ್ಕಷ್ಟು
ಒಣ ಕೊಬ್ಬರಿ

ಮಾಡುವ ವಿಧಾನ
ಒಣ ಮೆಣಸಿನಕಾಯಿ ಮಾತ್ರ ಹುರಿದುಕೊಳ್ಳಬೇಕು. ಇನ್ನುಳಿದ ಜೀರಿಗೆ, ಬೆಳ್ಳುಳ್ಳಿ, ಬೆಲ್ಲ, ಹುಣುಸೆ ಹಣ್ಣು, ಉಪ್ಪು ಸೇರಿಸಿ ಸ್ವಲ್ಪ ನೀರನ್ನು ಹಾಕಿ ಚೆನ್ನಾಗಿ ರುಬ್ಬಬೇಕು. ಹೊರಳಿನಲ್ಲಿ ರುಬ್ಬಿದ್ರೆ ಅದ್ಬುತವಾದ ರುಚಿ (ಮಿಕ್ಸಿ ಆಯ್ಕೆ) ಬರೋದು. ನಂತರ ಒಲೆ ಮೇಲೆ ಬಾಣಲೆ ಇಟ್ಟು, ಅದು ಕಾದ ನಂತರ ಒಗ್ಗರಣೆ ಹಾಕಿ. ರುಬ್ಬಿದ ಮಸಾಲೆಯನ್ನು ಅದಕ್ಕೆ ಹಾಕಿ ಚೆನ್ನಾಗಿ ಕುದಿಸಿದರೆ ಖಾರ ರೆಡಿ. ಎಣ್ಣೆ ಜಾಸ್ತಿ ಹಾಕಿದರೆ ಒಂದು ತಿಂಗಳವರೆಗೆ ಶೇಖರಿಸಿಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!