ಮಳೆಗಾಗಿ ಪ್ರಾಥಿ೯ಸಿ ಗೊಂಬೆಗಳ ಮದುವೆ ಮಾಡಿದ ಗ್ರಾಮಸ್ಥರು!

ಹೊಸದಿಗಂತ ವರದಿ, ಕಲಬುರಗಿ:

ಮುಂಗಾರು ಮಳೆ ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ,ಮಳೆ ಬಾರದ ಕಾರಣ ಜಿಲ್ಲೆಯ ರೈತರು ಕಂಗಾಲಾಗಿ ಕುಳಿತ ಸನ್ನಿವೇಶದಲ್ಲಿ, ಜಿಲ್ಲೆಯ ಆಳಂದ ತಾಲೂಕಿನ ಕೊಡಲ ಹಂಗರಗಾ ಗ್ರಾಮದ ಗ್ರಾಮಸ್ಥರು ಹಳ್ಳಿಗಳ ಪದ್ದತಿಯಂತೆ ಜೋಡಿ ಗೊಂಬೆಗಳ ಮದುವೆ ಮಾಡುವ ಮೂಲಕ ಮಳೆಗಾಗಿ ವಿಶೇಷ ಪ್ರಾಥ೯ನೆ ಮಾಡಿದ್ದಾರೆ.

ಜಿಲ್ಲೆಯ ಆಳಂದ ತಾಲೂಕಿನ ಕೊಡಲ ಹಂಗರಗಾ ಗ್ರಾಮದ ವೀರಭದ್ರೇಶ್ವರ ದೆವಸ್ಥಾನದಲ್ಲಿ ಗ್ರಾಮದ ಮಹಿಳೆಯರು, ಹಿರಿಯರು ಸೇರಿ ಮನುಷ್ಯರಂತೆ ಚಿಂಚೋಳಿ ಗ್ರಾಮದ ಹೆಣ್ಣು ಗೊಂಬೆ,ಹಾಗೂ ಕೊಡಲ ಹಂಗರಗಾ ಗ್ರಾಮದ ಗಂಡು ಗೊಂಬೆಯನ್ನು ಪದ್ದತಿಯಂತೆ ಸುರುಗಿ ಸುತ್ತಿ,ಎಣ್ಣೆ ಹಚ್ಚಿ,ತದನಂತರ ಹೊಸ ಬಟ್ಟೆ ತೊಡಿಸಿ,ಜೋಡಿ ಗೊಂಬೆಗಳಿಗೆ ಮದುವೆ ಮಾಡಿಸಿದ್ದಾರೆ.

ಸರಿಸುಮಾರು 50 ಜನ ಗ್ರಾಮಸ್ಥರು ಸೇರಿ ಗೊಂಬೆಗಳ ಮದುವೆ ಮಾಡಿಸಿ ತದನಂತರ ಊಟ ಮಾಡಿ ನಾಳೆ ಅಥವಾ ನಾಡಿದ್ದಾದರೂ ಒಳ್ಳೆಯ ಮಳೆ ಬರಲೆಂದು ವಿಶೇಷ ಪ್ರಾಥ೯ನೆ ಮಾಡಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.

ಗೊಂಬೆಗಳ ವಿಶೇಷ ಮದುವೆ ಸಮಾರಂಭಕ್ಕೆ ಗ್ರಾಮಸ್ಥರಾದ ಲಕ್ಷ್ಮಿಪುತ್ರ ನಾಗಡೆ,ಅಮೃತ ಬಸ್ತೆ,ನಾಗೀಂದ್ರಪ್ಪಾ ಬಸ್ತೆ,ಬಸವರಾಜ ಬಿಲಗುಂದಿ,ರವಿ ಚಿತಲಿ,ರೇಖಾ ಬಿರಾದಾರ, ಲಕ್ಷ್ಮಿ ಬಸ್ತೆ,ಅಂಬಬಾಯಿ ಬಸ್ತೆ,ಶಿವಮ್ಮಾ ಬಸ್ತೆ,ಜಗದೇವಿ,ಸರಸ್ವತಿ, ಈರಮ್ಮಾ ವಗದಗಿ೯,ನಿಂಗಮ್ಮಾ,ಬಸಯ್ಯಾ ಸ್ವಾಮಿ, ಶಣ್ಮುಖಯ್ಯಾ ಸ್ವಾಮಿ ಸೇರಿದಂತೆ ಅನೇಕ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!