ವಿಮ್ಸ್ ನಲ್ಲಿ ಮೂವರ ಸಾವು ಪ್ರಕರಣ: ವಿಶೇಷ ತನಿಖಾ ತಂಡ ಭೇಟಿ, ಪರಿಶೀಲನೆ

ಹೊಸದಿಗಂತ ವರದಿ, ಬಳ್ಳಾರಿ:
ವಿಮ್ಸ್ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸಂಭವಿಸಿದ ಮೂವರ ಸಾವು ಪ್ರಕರಣಕ್ಕೆ ಸಂಬಂದಿಸಿದಂತೆ ವಿಶೇಷ ತನಿಖಾ ತಂಡದ ಸದಸ್ಯರು ಬಳ್ಳಾರಿಯ ವಿಮ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದರು.
ವಿಮ್ಸ್ ನಿರ್ದೇಶಕರು ಕಚೇರಿಗೆ ಆಗಮಿಸುವ ಮುನ್ನವೇ ತನಿಖಾ ತಂಡದ ಸದಸ್ಯರು ಕಚೇರಿಗೆ ಪ್ರವೇಶಿಸಿದ್ದರು. ನಂತರ ನಿರ್ದೇಶಕ ಡಾ.ಗಂಗಾಧರ್ ಗೌಡ ಅವರು ಆಗಮಿಸಿದರು. ಈ ವೇಳೆ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯಡು, ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ರಾಮಾಂಜಿನೇಯಲು, ಸದಸ್ಯ ರಾಜಸೇಖರ್ ಸೇರಿದಂತೆ ಪಾಲಿಕೆಯ ವಿವಿಧ ಸದಸ್ಯರು, ತನಿಖಾ ತಂಡದ ಸದಸ್ಯರೊಂದಿಗೆ ಚರ್ಚಿಸಿದರು.
ಮೂವರ ಸಾವು ಪ್ರಕರಣ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಡೆದಿದ್ದು, ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಎಂದು ಒತ್ತಾಯಿಸಿದರು. ನಂತರ ತನಿಖಾ ತಂಡದ ಅಧ್ಯಕ್ಷೆ ಸ್ಮೀತಾ, ಡಾ.ಸಿದ್ದಕಿ, ಡಾ.ದಿವಾಕರ್, ಯೋಗೇಶ್, ಉಮಾ ಅವರ ನೇತೃತ್ವದ ತಂಡ ವಿಮ್ಸ್ ಗೆ ಭೇಟಿ ನೀಡಿ ಪರಿಶೀಲಿಸಿದರು. ಮೊದಲಿಗೆ ಜನರೇಟರ್ ವ್ಯವಸ್ಥೆ, ಪರಿಶೀಲಿಸಿದರು, ಸ್ಥಳದಲ್ಲಿದ್ದ ಜನರೇಟರ್ ನಿರ್ವಹಣೆ ಹೊತ್ತ ಸಿಬ್ಬಂದಿ ಶ್ರೀದೇವಿ ಅವರಿಂದ ತಂಡದ ಸದಸ್ಯರು ಮಾಹಿತಿ ಪಡೆದರು. ನಂತರ ವಿಮ್ಸ್ ನ ನಾನಾ ವಿಭಾಗಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ರೋಗಿಗಳು, ಅವರ ಸಂಬಂಧಿಕರು ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ತನಿಖಾ ತಂಡದ ಸದಸ್ಯರ ಎದುರು ಬಿಚ್ಚಿಟ್ಟರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!