Thursday, March 23, 2023

Latest Posts

ಸಾಕು ನಾಯಿ ವಿಚಾರದಲ್ಲಿ ನಿಯಮ ಉಲ್ಲಂಘನೆ: ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗೆ ಸಂಕಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಪ್ರೀತಿಯ ನಾಯಿ ವಿಚಾರದಲ್ಲಿ ಅವರು ನಿಯಮ ಉಲ್ಲಂಘಿಸಿದ್ದಾರೆ.

ಹೈಡ್ ಪಾರ್ಕ್‌ನಲ್ಲಿ ರಿಷಿ ಸುನಕ್ ಹಾಗೂ ಕುಟುಂಬ ತಮ್ಮ ಸಾಕು ನಾಯಿ ಲ್ಯಾಬ್ರಡಾರ್ ನೋವಾ ಹಾಯಾಗಿ ತಿರುಗಾಡಲು ಬಿಟ್ಟಿದ್ದಾರೆ. ಈ ಪಾರ್ಕ್‌ನಲ್ಲಿ ಈ ರೀತಿ ನಾಯಿಗಳನ್ನು ಬಿಡುವಂತಿಲ್ಲ. ಈ ವಿಡಿಯೋ ವೈರಲ್ ಆಗಿದೆ. ಇಷ್ಟೇ ಅಲ್ಲ ಈ ಕುರಿತು ಪೊಲೀಸರು ರಿಷಿ ಸುನಕ್ ಹಾಗೂ ಕುಟುಂಬಕ್ಕೆ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ಹೈಡ್ ಪಾರ್ಕ್‌ನಲ್ಲಿ ನಾಯಿ ಕರೆದುಕೊಂಡು ಹೋಗಲು ಅನುಮತಿ ಇದೆ. ಆದರೆ ನಾಯಿಯ ಬೆಲ್ಟ್ ತೆಗೆದುತಾನೇ ತಿರುಗಾಡಲು ಅವಕಾಶವಿಲ್ಲ. ಮಾಲೀಕರು ಬೆಲ್ಟ್ ಅಥವಾ ಚೈನ್ ಮೂಲಕವೇ ಕರೆದುಕೊಂಡು ಹೋಗಬೇಕು. ಇಲ್ಲಿನ ವನ್ಯಜೀವಿಗಳಿಗೆ ಹಾಗೂ ಪಾರ್ಕ್‌ಗೆ ಆಗಮಿಸುವ ಯಾರಿಗೂ ಸಮಸ್ಯೆಯಾಗಬಾರದು ಅನ್ನೋ ಕಾರಣಕ್ಕೆ ಈ ನಿಯಮ ಜಾರಿಯಲ್ಲಿದೆ. ಈ ನಿಮಯದ ಕುರಿತು ಹೈಡ್ ಪಾರ್ಕ್‌ನ ಹಲವು ಭಾಗದಲ್ಲಿ ಸೂಚನಾ ಫಲಕ ಹಾಕಲಾಗಿದೆ.

ಇದೀಗ ಇದ್ಯಾವುದನ್ನು ಪರಿಗಣಿಸಿದ ರಿಷಿ ಸುನಕ್ ತಮ್ಮ ನೋವಾ ನಾಯಿಯನ್ನು ಅಡ್ಡಾಯಲು ಬಿಟ್ಟಿದ್ದಾರೆ. ಇತ್ತ ರಿಷಿ ಸುನಕ್, ಪತ್ನಿ ಅಕ್ಷತಾ ಮೂರ್ತಿ ಹಾಗೂ ಮಕ್ಕಳು ಜೊತೆ ಜೊತೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗಿದೆ. ಇದನ್ನು ಜನರು ಗಮನಿಸಿ ಪೊಲೀಸರಿಗೆ ಸೂಚಿಸಿದ್ದಾರೆ.
ಇತ್ತ ಪೊಲೀಸರು ರಿಷಿ ಸುನಕ್ ಹಾಗೂ ಅಕ್ಷತಾ ಮೂರ್ತಿಗೆ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಸೂಚನೆ ಬೆನ್ನಲ್ಲೇ ಅಕ್ಷತಾ ಮೂರ್ತಿ ನಾಯಿಯನ್ನು ಹಿಡಿದು ಬೆಲ್ಟ್ ಹಾಕಿದ್ದಾರೆ. ಆದರೆ ಸುನಕ್ ನಿಯಮ ಉಲ್ಲಂಘನೆ ಇದೀಗ ಭಾರಿ ಚರ್ಚೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!