ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕಮಾಂಡೋ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಣಿಪುರದ ಮೊರೆಹ್‌ನಲ್ಲಿ ಮತ್ತೆ ಹಿಂಸಾಚಾರ ನಡೆದಿದ್ದು ಈ ಘಟನೆಯಲ್ಲಿ ಪೊಲೀಸ್ ಕಮಾಂಡೋ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಭಾರತ-ಮ್ಯಾನ್ಮಾರ್ ಗಡಿಯಲ್ಲಿರುವ ಪ್ರಮುಖ ವ್ಯಾಪಾರ ನಗರವಾದ ಮೊರೆಹ್​ ನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಗುಂಡಿನ ಚಕಮಕಿ ಶುರುವಾಗಿದೆ.

ದಾಳಿಕೋರರು ಮೋರೆ ಬಳಿಯ ಭದ್ರತಾ ಪೋಸ್ಟ್‌ಗೆ ಬಾಂಬ್‌ಗಳನ್ನು ಎಸೆದಿರುವುದು ಮತ್ತು ಗುಂಡು ಹಾರಿಸಿದರು .ದಾಳಿಕೋರರು ತಾತ್ಕಾಲಿಕ ಕಮಾಂಡೋ ಪೋಸ್ಟ್‌ಗೆ ಆರ್‌ಪಿಜಿ ಶೆಲ್‌ಗಳನ್ನು ಎಸೆದಿದ್ದು ಸುತ್ತಮುತ್ತ ನಿಂತಿದ್ದ ಹಲವಾರು ವಾಹನಗಳಿಗೆ ಹಾನಿಗೊಳಗಾಗಿರುವುದಾಗಿ ತಿಳಿಸಿದೆ.

ಮೊರೆಹ್​ ನಲ್ಲಿ ಸಾವನ್ನಪ್ಪಿರುವ ಕಮಾಂಡೋವನ್ನು ಐಆರ್‌ಬಿ ಸಿಬ್ಬಂದಿ ವಾಂಗ್‌ ಖೇಮ್ ಸೊಮೊರ್ಜಿತ್ ಎಂದು ಗುರುತಿಸಲಾಗಿದೆ. ಸೊಮೊರ್ಜಿತ್ ಇಂಫಾಲ್ ಪಶ್ಚಿಮ ಜಿಲ್ಲೆಯ ಮಾಲೋಮ್‌ ನವರು .

ಪೊಲೀಸ್ ಅಧಿಕಾರಿಯನ್ನು ಹತ್ಯೆಗೈದಿರುವ ಘಟನೆಯಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಇಬ್ಬರು ಬುಡಕಟ್ಟು ಜನಾಂಗದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ನಂತರ ಕುಕಿ ಗುಂಪುಗಳ ಬೃಹತ್ ಪ್ರತಿಭಟನೆ ನಡೆಸುತ್ತಿದ್ದು ಇದೀಗ ಹಿಂಸಾಚಾರಕ್ಕೆ ತಿರುಗಿರಬಹುದು ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!