RECIPE| ದೀಪಾವಳಿ ವಿಶೇಷ ಸೋರೆಕಾಯಿ ಖೀರ್ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಾಗ್ರಿಗಳು:

ಸೋರೆಕಾಯಿ
ಹಾಲು
ಸಕ್ಕರೆ
ತುಪ್ಪ
ಪಿಸ್ತಾ ಅಥವಾ ಬದಾಮಿ
ಗೋಡಂಬಿ
ಏಲಕ್ಕಿ
ಬಾಳೆಹಣ್ಣು ಎಸೆನ್ಸ್

ಮಾಡುವ ವಿಧಾನ:

* ಮೊದಲು ಸೋರೆಕಾಯಿ ಸಿಪ್ಪೆ ಸುಲಿದು ತುರಿಯಬೇಕು. ನಂತರ ಪ್ರೆಷರ್ ಕುಕ್ಕರ್ ನಲ್ಲಿ ಹಾಕಿ 2 ವಿಷಲ್ ಬರುವವರೆಗೆ ಬೇಯಿಸಿ.
* ನಂತರ ಅದನ್ನು ಒಂದು ಪಾತ್ರೆಗೆ ಹಾಕಿ ತಣ್ಣಗಾಗಲು ಇಡಬೇಕು. ಈಗ ಅದನ್ನು ಸೌಟ್ ನಿಂದ ಕುಟ್ಟಿ ಪೇಸ್ಟ್ ರೀತಿ ಮಾಡಿಕೊಳ್ಳಿ.
* ನಂತರ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ತುಪ್ಪ ಹಾಕಿ, ತುಪ್ಪ ಬಿಸಿಯಾದಾಗ ಏಲಕ್ಕಿ, ಪಿಸ್ತಾ ಅಥವಾ ಬಾದಾಮಿ, ಗೋಡಂಬಿ ಹಾಕಿ ಹುರಿಯಿರಿ. ನಂತರ ಬದಿಯಲ್ಲಿ ತೆಗೆದಿಡಿ.
* ಈಗ ಅದೇ ಬಾಣಲಿಗೆ ಬೇಯಿಸಿದ ಸೋರೆಕಾಯಿ ಹಾಕಿ ಕಡಿಮೆ ಉರಿಯಲ್ಲಿ ಹುರಿಯಿರಿ.
* ಈಗ ಪಾತ್ರೆಗೆ ಹಾಲನ್ನು ಹಾಕಿ ಕುದಿಸಿ. ನಂತರ ಸೋರೆಕಾಯಿ ಪೇಸ್ಟ್ ಅನ್ನು ಹಾಕಿ, ಸಕ್ಕರೆ ಹಾಕಿ ಸೌಟ್ ನಿಂದ ತಿರುಗಿಸಿ. ಇದನ್ನು ಬಾದಾಮಿ, ಗೋಡಂಬಿ, ಬಾಳೆ ಹಣ್ಣಿನಿಂದ ಅಲಂಕರಿಸಿದರೆ ಸೋರೆಕಾಯಿಯ ಖೀರ್ ರೆಡಿ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!