ʼತಮ್ಮ ದೇಶದ ದುಷ್ಕೃತ್ಯ ಮರೆ ಮಾಚಿ, ಪಾಕ್ ಭಾರತದತ್ತ ಬೊಟ್ಟು ಮಾಡುತ್ತಿದೆ: ವಿಶ್ವಸಂಸ್ಥೆಯಲ್ಲಿ ಪಾಕ್‌ ಪ್ರಧಾನಿಗೆ ಭಾರತದ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಶನಿವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ಕಾಶ್ಮೀರ ಸಮಸ್ಯೆ ಕುರಿತು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್‌ಗೆ ಭಾರತೀಯ ರಾಜತಾಂತ್ರಿಕರು ತೀವ್ರ ತಿರುಗೇಟು ನೀಡಿದ್ದಾರೆ.

ಯುಎನ್‌ಜಿಎಯಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹೇಳಿಕೆಗಳಿಗೆ ಭಾರತದ ಉತ್ತರದ ಹಕ್ಕನ್ನು ಚಲಾಯಿಸುವ ಸಂದರ್ಭದಲ್ಲಿ, ಪ್ರಥಮ ಕಾರ್ಯದರ್ಶಿ ಮಿಜಿತೊ ವಿನಿಟೊ ಅವರು ಪಾಕಿಸ್ತಾನದ ಪ್ರಧಾನಿಯ ಹೇಳಿಕೆಗಳಲ್ಲಿ “ತಮ್ಮ ದೇಶದಲ್ಲಿನ ದುಷ್ಕೃತ್ಯಗಳನ್ನು ಮರೆಮಾಚಿ ಮತ್ತು ಭಾರತದ ವಿರುದ್ಧದ ಕ್ರಮಗಳನ್ನು ಸಮರ್ಥಿಸಲಾಗಿದೆ” ಎಂದು ಹೇಳಿದ್ದಾರೆ.

“ಭಾರತದ ವಿರುದ್ಧ ಸುಳ್ಳು ಆರೋಪ ಮಾಡಲು ಪಾಕ್ ಪ್ರಧಾನಿ ಈ ಸಭೆಯ ವೇದಿಕೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಷಾದನೀಯ. ಅವರು ತಮ್ಮ ದೇಶದಲ್ಲಿನ ದುಷ್ಕೃತ್ಯಗಳನ್ನು ಮಬ್ಬುಗೊಳಿಸುವುದಕ್ಕಾಗಿ ಮತ್ತು ಭಾರತದ ವಿರುದ್ಧದ ಕ್ರಮಗಳನ್ನು ಸಮರ್ಥಿಸಲು ಹೀಗೆ ಮಾಡಿದ್ದಾರೆ” ಎಂದಿದ್ದಾರೆ.

“ತನ್ನ ನೆರೆಹೊರೆಯವರೊಂದಿಗೆ ಶಾಂತಿಯನ್ನು ಬಯಸುತ್ತದೆ ಎಂದು ಹೇಳಿಕೊಳ್ಳುವ ರಾಜಕೀಯವು ಎಂದಿಗೂ ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರಾಯೋಜಿಸುವುದಿಲ್ಲ ಅಥವಾ ಭೀಕರ ಮುಂಬೈ ಭಯೋತ್ಪಾದಕ ದಾಳಿಯ ಯೋಜಕರಿಗೆ ಆಶ್ರಯ ನೀಡುವುದಿಲ್ಲ.” ಎಂದು ತೀಕ್ಷ್ಣವಾಗಿ ಪಾಕಿಸ್ತಾನದ ಪ್ರಧಾನಿಯ ಆರೋಪಗಳಿಗೆ ತಿರುಗೇಟು ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!