ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ – ಈ ಬಾರಿಯ ವೈಶಿಷ್ಟ್ಯ ಹೀಗಿದೆ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್ :

ʻಮಿನಿ ಪಿಲಿಕುಳʼ ಖ್ಯಾತಿಯ ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಶನಿವಾರ ಮತ್ತು ಭಾನುವಾರ ವಿಜೃಂಭಣೆಯಿಂದ ಇಪ್ಪತ್ತನೇ ವರ್ಷದ ʻಕೋಟಿ-ಚೆನ್ನಯʼ ಜೋಡುಕರೆ ಕಂಬಳ ನಡೆಯಲಿದೆ. ಸಮಯ ಪ್ರಜ್ಞೆಯೊಂದಿಗೆ, ಸ್ವಚ್ಛ ಮಾದರೀ ಕಂಬಳವಾಗಿ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳವನ್ನು ರೂಪಿಸಲಾಗುತ್ತದೆ .

ಮೂಡುಬಿದಿರೆಯಲ್ಲಿ ನಡೆಯುವ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳವನ್ನು ಶೂನ್ಯ ತ್ಯಾಜ್ಯದ ಕಂಬಳವಾಗಿ ಆಯೋಜಿಸುವ ಕುರಿತು ಮೂಡುಬಿದಿರೆ ಪುರಸಭೆ ಹಾಗೂ ಕಂಬಳ ಸಮಿತಿ ತೀರ್ಮಾನಿಸಿದೆ .ವ್ಯಾಪಾರ ಮಾಡುವವರು ಏಕ ಬಳಕೆಯ ವಸ್ತುಗಳಾದ ಪ್ಲಾಸ್ಟಿಕ್‌, ಥರ್ಮಾಕೋಲ್‌, ಪ್ಲೇಟ್‌ಬೌಲ್‌, ಪೇಪರ್‌ಪ್ಲೇಟ್‌, ಪ್ಲಾಸ್ಟಿಕ್‌ಹಾಗೂ ಪೇಪರ್‌ಲೋಟ, ಪ್ಲಾಸ್ಟಿಕ್‌ಚಮಚ, ಪ್ಲಾಸ್ಟಿಕ್‌ಫೋರ್ಕ್‌, ಸ್ಟ್ರಾ ಮುಂತಾದವುಗಳಲ್ಲಿ ತಿಂಡಿ ತಿನಿಸುಗಳ ಮಾರಾಟ ನಿಷೇಧಿಸಲಾಗಿದೆ.

ಉದ್ಯಮಿ, ಸಮಾಜ ಸೇವಕ ಕನ್ಯಾನ ಸದಾಶಿವ ಕೆ ಶೆಟ್ಟಿಯವರಿಗೆ ೨೦ನೇ ವರ್ಷದ ಮೂಡುಬಿದಿರೆ ಕೋಟಿ ಚೆನ್ನಯ ಜೋಡುಕರೆ ಕಂಬಳದ ಗೌರವ ಸನ್ಮಾನ ನೀಡಲು ನಿರ್ಧರಿಸಲಾಗಿದೆ. ಕಂಬಳ ಕೋಣಗಳ ಯಜಮಾನ ದಿ.ಬಾಡ ಪೂಜಾರಿಯವರಿಗೆ ಮರಣೋತ್ತರ ಗೌರವ ಸನ್ಮಾನ, ಕಂಬಳ ಕೋಣದ ಯಜಮಾನ ಅಣ್ಣು ಶೆಟ್ಟಿ ಲಾಡಿ, ಹಿರಿಯ ಕಂಬಳ ಓಟಗಾರ ಸಂಜೀವ ಪೂಜಾರಿ, ಕಂಬಳ ಕೋಣದ ಯಜಮಾನ ಕಾಳು ಪಾಣಾರ ಮತ್ತು ಹಿರಿಯ ಕಂಬಳ ಓಟಗಾರ ಲೂಯಿಸ್ಸಲ್ದಾನ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಕಂಬಳಕ್ಕೆ ಊರ ಪರವೂರಿನಿಂದ ಬರುವವರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಹೊಟ್ಟೆತುಂಬ ಉಣ್ಣಬೇಕು, ಶಿಸ್ತಿನಿಂದ ಕಂಬಳದಲ್ಲಿ ಭಾಗವಹಿಸಬೇಕು, ತುಳುನಾಡಿನ ಜಾನಪದ ಕ್ರೀಡೆಯನ್ನು ಕಣ್ತುಂಬಿಕೊಳ್ಳಬೇಕು ಎಂಬ ಸದುದ್ದೇಶದಿಂದ ವ್ಯವಸ್ಥೆ ಮಾಡಲಾಗಿದೆ.

ಎಲ್ಲೂ ಏನೂ ಸಮಸ್ಯೆಗಳು ಉಂಟಾಗದಂತೆ ಆರು ಪ್ರತ್ಯೇಕ ಪರಿಸರದಲ್ಲಿ ಸುಸಜ್ಜಿತ ಪಾರ್ಕಿಂಗ್ವ್ಯವಸ್ಥೆ ಮಾಡಲಾಗಿದೆ. 65ಎಕ್ರೆ ವಿಶಾಲ ಪ್ರದೇಶದಲ್ಲಿ ಪಾರ್ಕಿಂಗ್ ನಡೆಯಲಿದೆ .150ಕ್ಕೂ ಅಧಿಕ ಸ್ವಯಂ ಸೇವಕರು ಕಾರ್ಯನಿರ್ವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!