Saturday, January 28, 2023

Latest Posts

ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ: ಏನಂದ್ರು ಸಿಎಂ ಬೊಮ್ಮಾಯಿ??

ಹೊಸದಿಗಂತ ವರದಿ, ಹುಬ್ಬಳ್ಳಿ:
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಮಾಡುವ ಯಾವುದೇ ಯೋಚನೆ ಸರ್ಕಾರ ಹಾಗೂ ಪಕ್ಷ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ‌ ಅಭಿವೃದ್ಧಿ ಯೋಜನೆ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಆ ವರದಿಯ ಆಧಾರದ ಮೇಲೆ ಸಕಾರಾತ್ಮಕ ಜನಾದೇಶ ಪಡೆಯಲು ನಾವು ಪ್ರಯತ್ನಿಸುತ್ತೇವೆ ಎಂದರು.
ಬಹುಶಃ ಕಾಂಗ್ರೆಸ್ ನಾಯಕರಿಗೆ ಸಮಯ ಕೊಟ್ಟಷ್ಟು ಒಳಜಗಳ ಹೆಚ್ಚಾಗುತ್ತಿವೆ. ಅವರಲ್ಲಿ ಅಭದ್ರತೆ ಕಾಡುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಜಗಳವಾಡಬಾರದು ಎಂಬ ಉದ್ದೇಶದಿಂದ ಚುನಾವಣೆ ಪೂರ್ವಾವಧಿ ಯಾಗುತ್ತದೆ ಎಂಬ ಕಾರಣಕ್ಕೂ ಈ ಸಂದೇಶ ನೀಡಿದ್ದಾರೆ ಎಂದರು.
ಕೊರೋನಾ ಬಗ್ಗೆ ಜಾಗೃತಿಯಿರಲಿ:
ಕೊರೋನಾ ಬಗ್ಗೆ ಜನರು ಗಾಬರಿಯಾಗುವ ಅವಶ್ಯಕತೆ ಇಲ್ಲ. ಜಾಗೃತರಾಗಬೇಕು. ಕೋವಿಡ್ ಕುರಿತು ಕಂದಾಯ ಸಚಿವ ಆರ್. ಅಶೋಕ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಡಿ. 25 ರಂದು ಸಭೆ ನಡೆಸಲಿದ್ದಾರೆ ಎಂದರು.
ಬೂಸ್ಟರ್ ಡೋಸ್ ಗಳನ್ನು ಕೊಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರಗಳನ್ನು ಏರ್ಪಡಿಸುವುದು. ಕೊರೋನಾ ಪರೀಕ್ಷೆಗಳನ್ನು ಹೆಚ್ಚು‌ ನಡೆಸಲಾಗುವುದು. ಪ್ರತಿಯೊಂದು ಐಎಲ್ಐ, ಸಾರಿ ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ಕೈಗೊಳ್ಳುವುದು ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!