ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಅವನೀತ್ ಕೌರ್ ಅವರ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟಕ್ಕೂ ಈ ಫೋಟೋ ವೈರಲ್ ಆಗಲು ಮುಖ್ಯ ಕಾರಣ ಯಾರು ಗೊತ್ತಾ?
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಅವನೀತ್ ಕೌರ್ ಫೋಟೋಗಳದ್ದೇ ಸದ್ದು, ಇಷ್ಟಕ್ಕು ಇದಕೆಲ್ಲ ಮುಖ್ಯ ಕಾರಣ ಬೇರೆ ಯಾರು ಅಲ್ಲ ಕಿಂಗ್ ವಿರಾಟ್ ಕೊಹ್ಲಿ. ಹೌದು, ನಟಿ ಅವನೀತ್ ಬೋಲ್ಡ್ ಫೋಟೋವೊಂದಕ್ಕೆ ಕೊಹ್ಲಿ ಒಂದು ಲೈಕ್ ಒತ್ತಿದ್ದೇ ತಡ ಇನ್ಸ್ಟಾಗ್ರಾಮ್ ಫುಲ್ ವೈಲೆಂಟ್.
ಅವನೀತ್ ಕೌರ್ ಕೆಲ ದಿನಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಈ ಫೋಟೋಗೆ ವಿರಾಟ್ ಕೊಹ್ಲಿ ತನ್ನ ಅಧಿಕೃತ ಖಾತೆಯಿಂದ ಲೈಕ್ ಒತ್ತಿದ್ದಾರೆ. ಇದನ್ನು ಗಮನಿಸಿದ ಅಭಿಮಾನಿಗಳು ಅದರ ಸ್ಕ್ರೀನ್ ಶಾಟ್ ಅನ್ನು ವೈರಲ್ ಮಾಡಿದ್ದರು. ವಿರಾಟ್ ಕೊಹ್ಲಿಯ ಲೈಕ್ ಬೀಳುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್, ಲೈಕ್ ಒತ್ತಲು ಹಿಂದೇಟು ಹಾಕುವ ಕೊಹ್ಲಿ, ಅವನೀತ್ ಅವರ ಬೋಲ್ಡ್ ಫೋಟೋಗೆ ಬೌಲ್ಡ್ ಆಗಿದ್ದಾರೆ ಎಂಬ ಪ್ರತಿಕ್ರಿಯೆಗಳು ಫುಲ್ ಸದ್ದು ಮಾಡುತ್ತಿದೆ.
ಈ ಬಗ್ಗೆ ಇದೀಗ ವಿರಾಟ್ ಕೊಹ್ಲಿ ಸ್ಪಷ್ಟನೆಯನ್ನು ನೀಡಿದ್ದಾರೆ. ನನ್ನ ಫೀಡ್ ಅನ್ನು ತೆರವುಗೊಳಿಸುವಾಗ, ಅಲ್ಗಾರಿದಮ್ ತಪ್ಪಿನಿಂದಾಗಿ ಅವನೀತ್ ಕೌರ್ ಅವರ ಫೋಟೋಗೆ ಲೈಕ್ ಒತ್ತಿರಬಹುದು. ಇದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲ. ಯಾವುದೇ ಅನಗತ್ಯ ಊಹೆಗಳನ್ನು ಮಾಡದಂತೆ ನಾನು ವಿನಂತಿಸುತ್ತೇನೆ. ನೀವು ಅರ್ಥಮಾಡಿಕೊಂಡಿರುವುದಕ್ಕೆ ಧನ್ಯವಾದಗಳು ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.