VIRAL | ತರಕಾರಿಯಂತೆ ತಳ್ಳುವ ಗಾಡಿಯಲ್ಲಿ ರಾಶಿ ರಾಶಿ ಮ್ಯಾಗಿ ಮಾರಾಟ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾಗಿಯನ್ನು ಸಾಮಾನ್ಯವಾಗಿ 10 ರೂಪಾಯಿಗಳ ಪ್ಯಾಕ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ ಅನ್ನೋದು ತಿಳಿದಿರುವ ವಿಚಾರ. ಆದರೆ ತರಕಾರಿಯಂತೆ ತಳ್ಳುವ ಗಾಡಿಯಲ್ಲಿ ಮ್ಯಾಗಿ ಮಾರುವುದನ್ನು ನೋಡಿದ್ದೀರಾ? ಆದರೆ ಇಲ್ಲೊಬ್ಬ ವ್ಯಕ್ತಿ ಮ್ಯಾಗಿ ಅನ್ನು ಮಾರಾಟ ಮಾಡುತ್ತಿರುವ ರೀತಿ ನಿವು ನೋಡಿದರೆ ಅಚ್ಚರಿ ಪಡುತ್ತೀರಾ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

ಈ ವೈರಲ್ ವೀಡಿಯೋದಲ್ಲಿ, ವ್ಯಕ್ತಿಯೊಬ್ಬ ತಳ್ಳುವ ಗಾಡಿಯಲ್ಲಿ ಟನ್‌ಗಟ್ಟಲೆ ಮ್ಯಾಗಿ ಮಾರಾಟ ಮಾಡುತ್ತಿರುವ ದೃಶ್ಯ ಕಾಣಬಹುದು. ಮ್ಯಾಗಿ ಜೊತೆಗೆ ಮ್ಯಾಗಿ ಮಸಾಲಾ ಪ್ಯಾಕೆಟ್‌ಗಳನ್ನು ಕೂಡ ಜನರಿಗೆ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಮ್ಯಾಗಿ ಅನ್ನು ತುಂಬಿಸಿ ವಿತರಿಸಲಾಗುತ್ತದೆ.

ಮ್ಯಾಗಿ ಮಾರಾಟ ಮಾಡುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು. ಈ ವೀಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆ @chatore_broothers  ನಲ್ಲಿ ಹಂಚಿಕೊಳ್ಳಲಾಗಿದೆ. ಇಲ್ಲಿಯವರೆಗೂ ಈ ವಿಡಿಯೋಗೆ 43 ಮಿಲಿಯನ್​​​ ವೀಕ್ಷಣೆ ಹಾಗೂ ಏಳು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ದೊರೆತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!