Sunday, December 3, 2023

Latest Posts

ರಾಜ್ಯಕ್ಕೆ ಈ ವರ್ಷವಿಡೀ ಕಾಡಲಿದೆ ವೈರಲ್ ಸೋಂಕು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹವಾಮಾನ ಬದಲಾಗುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ವೈರಲ್ ಸೋಂಕುಗಳು ಹೆಚ್ಚಾಗುತ್ತಿವೆ, ಇಡೀ ವರ್ಷ ಈ ಸಮಸ್ಯೆ ಬಾಧಿಸಲಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಸಲಹೆಗಾರರಾದ ಡಾ ರಜತ್ ಆತ್ರೇಯ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರ್ಷವಿಡೀ ವೈರಲ್ ಫೀವರ್, ಚಿಕುನ್‌ಗುನ್ಯ, ಕಾಂಜಕ್ಟಿವೈಟಿಸ್, ಮಲೇರಿಯಾ ಹಾಗೂ ಹೊಟ್ಟೆಗೆ ಸಂಬಂಧಿಸಿದ ಸೋಂಕುಗಳು ಬಾಧಿಸುತ್ತವೆ ಎಂದು ಹೇಳಿದ್ದಾರೆ.

ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಅದರಲ್ಲಿಯೂ ಮಕ್ಕಳು ಹಾಗೂ ವಯಸ್ಸಾದವರಿಗೆ ಸೋಂಕು ಬಾರದಂತೆ ಜಾಗ್ರತೆ ವಹಿಸಬೇಕು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!