Friday, December 9, 2022

Latest Posts

ತನ್ನ ಪುಟ್ಟ ಹಾಸಿಗೆಯನ್ನು ಬೀದಿ ನಾಯಿಗಳೊಂದಿಗೆ ಹಂಚಿಕೊಂಡ ನಿರಾಶ್ರಿತ: ಈತ ಭೂಮಿ ಮೇಲಿನ ದೇವರು ಅಂದ್ರು ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಿರಾಶ್ರಿತ ವ್ಯಕ್ತಿಯೊಬ್ಬ ಬೀದಿ ನಾಯಿಗಳೊಂದಿಗೆ ಪಟ್ಟ ಹಾಸಿಗೆ ಹಂಚಿಕೊಂಡು ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಜನರ ಹೃದಯ ಗೆಲ್ಲುತ್ತಿದೆ. ಈ ಚಿತ್ರವನ್ನು ಐಎಫ್‌ಎಸ್ (ಭಾರತೀಯ ಅರಣ್ಯ ಸೇವೆ) ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಂಡಿದ್ದಾರೆ. “ಈ ದೊಡ್ಡ ಪ್ರಪಂಚದ ಬಗ್ಗೆ ತಿಳಿದುಕೊಳ್ಳಬೇಕಾದರೆ ನಮ್ಮ ಹೃದಯವು ಸಾಕಷ್ಟು ದೊಡ್ಡದಾಗಿರಬೇಕು” ಎಂದು ನಂದಾ ಪೋಸ್ಟ್‌ ಗೆ ಶೀರ್ಷಿಕೆ ನೀಡಿದ್ದಾರೆ.
ಚಿತ್ರದಲ್ಲಿ, ಮನೆಯಿಲ್ಲದ ನಿರತಾಶ್ರಿತ ವ್ಯಕ್ತಿಯೊಬ್ಬರು ರಸ್ತೆಯ ಬದಿಯಲ್ಲಿ ಬೆಟ್‌ ಶೀಟ್‌ ಹೊದ್ದು ಮಲಗಿರುವುದು ಕಾಣುತ್ತದೆ. ಚಿಕ್ಕ ಹಾಸಿಗೆಯೊಳಗೆ ಅವನೊಬ್ಬನೇ ಅಲ್ಲ ಸುಮಾರು ಏಳೆಂಟು ಬೀದಿನಾಯಿಗಳು ಜಾಗವನ್ನು ಹಂಚಿಕೊಂಡಿವೆ. ಅಲ್ಲಿ ಮೇಲು ಕೀಳು, ಹಮ್ಮು ಬಿಮ್ಮುಗಳಿಲ್ಲ. ಯಾವುದೇ ಚಿಂತೆಯಿಲ್ಲದೆ ಎಲ್ಲರೂ ನಿರುಮ್ಮಳ ನಿದ್ರೆ ಜಾರಿದ್ದಾರೆ. ಹೀಗಿರಲು ಎಲ್ಲರಿಗೂ ಸಾಧ್ಯವಿಲ್ಲ ಅಲ್ಲವೆ?.
ಚಿತ್ರವನ್ನು ಹೆಚ್ಚು ಹೃದಯಸ್ಪರ್ಶಿಯಾಗಿಸುವುದೇನೆಂದರೆ, ನಿರಾಶ್ರಿತ ವ್ಯಕ್ತಿಯು ತನಗೆ ಮಾತ್ರವಲ್ಲದೆ ತನ್ನ ಸ್ನೇಹಿತರಿಗೂ ನೆರಳು ನೀಡುವ ಸಲುವಾಗಿ ಛತ್ರಿಯನ್ನು ತೆರೆದಿದ್ದಾನೆ.

ಈ ಚಿತ್ರವು ಇಂಟರ್ನೆಟ್ ಬಳಕೆದಾರರ ಗಮನವನ್ನು ಬಹುವಾಗಿ ಸೆಳೆದಿದೆ. ಈ ಹೃದಯಸ್ಪರ್ಶಿ ನಡವಳಿಕೆಗಾಗಿ ಅವರು ವ್ಯಕ್ತಿಯನ್ನು ಹೊಗಳಿದ್ದಾರೆ. “24 ಕ್ಯಾರೆಟ್ ಚಿನ್ನದ ಹೃದಯ” ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. “ತುಂಬಾ ಸುಂದರವಾದ ಆಲೋಚನೆ,” ಇನ್ನೊಬ್ಬರು ಹೇಳಿದರು. “ವಾವ್, ಭೂಮಿಯ ಮೇಲಿನ ದೇವರು,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. “ವಾಟ್ ಎ ಮ್ಯಾನ್,” ಎಂದು ಇನ್ನೊಬ್ಬರು ಉದ್ಘರಿಸಿದ್ದಾರೆ.
ಸಾಕುಪ್ರಾಣಿಗಳು ಮತ್ತು ಅವರುಗಳ ವರ್ತನೆಗಳು ಖಂಡಿತವಾಗಿಯೂ ಯಾರೊಬ್ಬರ ದಿನವನ್ನು ಬೆಳಗಿಸಬಹುದು ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!