ಮದುವೆ ಅಂದರೆ ಒಂದು ಫೈನಾನ್ಷಿಯಲ್‌ ಸೆಟಪ್ ಎಂದ ನಿತ್ಯಾ ಮೆನನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಾಯಕಿ ನಿತ್ಯಾ ಮೆನನ್ ಸರಣಿ ಚಿತ್ರಗಳ ಹೊರತಾಗಿ, ಸೀರೀಸ್ ಮತ್ತು OTT ಚಲನಚಿತ್ರಗಳಲ್ಲಿ ಸಹ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ನಿತ್ಯಾ ವಂಡರ್ ವುಮನ್ ಎಂಬ ಹೊಸ ಕಾನ್ಸೆಪ್ಟ್‌ ಜೊತೆ ಪ್ರೇಕ್ಷಕರ ಮುಂದೆ ಬಂದರು. ಚಿತ್ರವು ಸೋನಿಲಿವ್ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ನಿತ್ಯಾ ಇದರಲ್ಲಿ ಗರ್ಭಿಣಿಯಾಗಿ ನಟಿಸಿದ್ದಾರೆ. ಚಿತ್ರತಂಡ ಈ ಚಿತ್ರದ ಪ್ರಚಾರವನ್ನು ಅದ್ಧೂರಿಯಾಗಿ ನಡೆಸುತ್ತಿದೆ.

34 ವರ್ಷಗಲಾದರೂ ನಿತ್ಯಾ ಮದುವೆ ಬಗ್ಗೆ ಎಲ್ಲೂ ಚಕಾರವೆತ್ತಿಲ್ಲ. ಕೆಲವು ದಿನಗಳ ಹಿಂದೆ ಮಲಯಾಳಂನ ಯೂಟ್ಯೂಬರ್ ಜೊತೆ ನಿತ್ಯಾ ಮದುವೆಯಾಗುವ ಬಗ್ಗೆ ವರದಿಗಳು ಬಂದಿದ್ದು, ನಿತ್ಯಾ ಗಂಭೀರವಾಗಿ ಪ್ರತಿಕ್ರಿಯಿಸಿದ್ದರು. ಇದೀಗ ವಂಡರ್ ವುಮನ್ ಚಿತ್ರದ ಪ್ರಚಾರದ ಭಾಗವಾಗಿ ನೀಡಿದ ಸಂದರ್ಶನದಲ್ಲಿ, ನಿತ್ಯಾ ಮೆನನ್ ಮದುವೆಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್ಗಳನ್ನು ಮಾಡಿದ್ದಾರೆ.

ನಿತ್ಯಾ ಮೆನನ್ ಮದುವೆ ಬಗ್ಗೆ ಮಾತನಾಡುತ್ತಾ.. ”ನಾನು ತುಂಬಾ ಸಂಪ್ರದಾಯಸ್ಥ ಹುಡುಗಿ. ನಾನು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುತ್ತೇನೆ. ಮದುವೆಯು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಾಗಿದೆ. ಮದುವೆಯು ಅಂತಹ ವಿಷಯಗಳೊಂದಿಗೆ ಸಂಬಂಧಿಸಿದೆ. ಆದ್ರೂ ಇಂಥ ಫೈನಾನ್ಷಿಯಲ್ ಸೆಟಪ್‌ಗಾಗಿಯೇ ಮದುವೆ ಆಗ್ತಾರೆ ಅಂತಾದರೆ ನನಗೆ ಮದುವೆಯೇ ಬೇಡ. ಅದಕ್ಕೂ ಮೀರಿ ಯೋಚಿಸುವ ಹುಡುಗ ಸಿಕ್ಕರೆ ಖಂಡಿತಾ ಮದುವೆಯಾಗುತ್ತೇನೆ ಎಂಬುದಾಗಿ ತಿಳಿಸಿದರು. ನಿತ್ಯಾ ಆಲೋಚನೆಗೆ ತಕ್ಕನಾದ ಹುಡುಗ ಎಲ್ಲಿದ್ದಾನ, ಯಾವಾಗ ಸಿಗುತ್ತಾನೋ ಅಂತಿದಾರೆ ಪ್ರೇಕ್ಷಕರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!