Saturday, December 9, 2023

Latest Posts

ವೈರಲ್‌ ವೀಡಿಯೋ |ಕಾಡುಕೋಣದ ಹೊಡೆತಕ್ಕೆ ಹಾರಿ ಬಿತ್ತು ಆಟೋ… ಒಳಗಿದ್ದವರು ಜಸ್ಟ್‌ ಮಿಸ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಡೆಮ್ಮೆಗಳಬಗ್ಗೆ ಕೇಳಿಯೇ ಇರುತ್ತೀರಿ. ನೋಡಲು ಸಾಮಾನ್ಯ ಎಮ್ಮೆಯ ಮುಖವನ್ನು ಹೋಲಿಕೆಯದರೂ ಅವುಗಳ ಗಾತ್ರ ಬೃಹತ್‌ ದೊಡ್ಡದು. ನಿತ್ಯಹರಿದ್ವರ್ಣ ಕಾಡುಗಳ ಪ್ರದೇಶದಲ್ಲಿ ಅವು ಸರ್ವೇ ಸಾಮಾನ್ಯವಾಗಿ ಕಾಣಸಿಗುತ್ತವೆ. ನವಯುಗದಲ್ಲಿ ಕಾಡುಗಳಲ್ಲೇ ರಸ್ತೆಗಳಾಗಿರುವುದರಿಂದ ಅವುಗಳು ಆಗಾಗ ವಾಹನ ಸವಾರರಿಗೆ ಕಾಣ ಸಿಗುತ್ತವೆ. ಅದರಲ್ಲೂ ರಾತ್ರಿ ಹೊತ್ತು ದಾರಿಗೆ ಅಡ್ಡಗಟ್ಟಿ ನಿಲ್ಲುವ ಕೇಸುಗಳು ಜಾಸ್ತಿ.

ಈ ವಿಡಿಯೋ ಕೂಡ ಅಂತಹುದೇ ಒಂದು ಕಾಡೆಮ್ಮೆಯ ಹೊಡೆತಕ್ಕೆ ಸಿಕ್ಕಿದ ಆಟೋ ಹೇಗೆ ನೆಲಬಿಟ್ಟು ಹಾರಿ ಬಿತ್ತು ಎಂದು ತೋರಿಸುತ್ತದೆ. ತನ್ನೆರಡು ಕೊಂಬುಗಳಿಂದ ಕಾಡೆಮ್ಮೆ ಆಟೋದ ಮೇಲೆ ಶಕ್ತಿ ಪ್ರಯೋಗ ಮಾಡಿದ್ದರಿಂದ ಅಟೋದ ಮುಂದಿನ ಚಕ್ರ ನೆಲದಿಂದ ಹಾರಿ ಒಳಗಿದ್ದವರು ಸ್ವಲ್ಪದರಲ್ಲೇ ಬಚಾವಾಗಿದ್ದಾರೆ. ಆಮೇಲೆ ಅದೇನನ್ನಿಸಿತೋ ಮಹಿಷರಾಯ ಅಲ್ಲಿಂದ ಕಾಡಿನೆಡೆಗೆ ಓಡಿದ್ದಾನೆ. ಹೇಗಿತ್ತು ಆ ದೃಶ್ಯ ವೀಡಿಯೋ ನೋಡಿ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!