ಚಿರತೆಯನ್ನೇ ಹೆದರಿಸಿದ ಬೀದಿ ನಾಯಿ: ಎದುರು ನಿಂತು ಮಾಡಿದ್ದೇನು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿರತೆ ಮುಂದೆ ನಿಂತು ಬದುಕುಳಿದವರಿಲ್ಲ ಆದರೆ, ಇಲ್ಲೊಂದು ಬೀದಿ ನಾಯಿ ತನ್ನನ್ನು ಬೇಟೆಯಾಡಲು ಬಂದ ಚಿರತೆಯನ್ನೇ ಹೆದರಿಸಿ ಓಡಿಸಿದ ದೃಶ್ಯ ಸಾಮಾಜಿಕ ಜಾಲತಣಾದಲ್ಲಿ ವೈರಲ್‌ ಆಗಿದೆ.

ಜೈಕಿ ಯಾದವ್ ಎಂಬ ಟ್ವಿಟರ್ ಬಳಕೆದಾರರು ಈ ವೀಡಿಯೊವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದು ತಿಳಿದಿಲ್ಲ. ರಸ್ತೆ ಬದಿ ಮಲಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆಗೆ ಬೆಲರಿಳಿಸಿದೆ. ಒಂದೇ ಸಮನೆ ಜೋರಾಗಿ ಬೊಗಳುತ್ತಾ ಬಂದಿದ್ದ ಚಿರತೆಯನ್ನು ಓಡಿಸಿದೆ.

ಧೈರ್ಯಂ ಸರ್ವತ್ರ ಸಾಧನಂ ಎಂಬುದು ಈ ದೃಶ್ಯಗಳಿಂದ ತಿಳಿದುಬಂದಿದೆ. ಎಷ್ಟೇ ಶಕ್ತಿವಂತರು ಬಂದು ನಿಮ್ಮ ಮುಂದೆ ನಿಂತರೂ ಎದೆಗುಂದದೆ ನಿಮ್ಮ ಶಕ್ತಿ ಸಾಮರ್ಥ್ಯದ ಮೇಲೆ ನಂಬಿಕೆಯಿಟ್ಟು ಎದುರಿಸಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!