ಸೆಮೀಸ್‌ಗೂ ಮುನ್ನ ಇಂಗ್ಲಿಷರಿಗೆ ಬಿಗ್‌ ಶಾಕ್:‌ ತಂಡದ ಸ್ಟಾರ್‌ ಬ್ಯಾಟರ್‌ ಆಡುವುದು ಡೌಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗುರುವಾರ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡವನ್ನು ಎದುರಿಸಲಿರುವ ಇಂಗ್ಲೆಂಡ್ ಗೆ ಅದಕ್ಕೂ ಮುನ್ನವೇ ದೊಡ್ಡ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್‌ ಬ್ಯಾಟರ್ ಡೇವಿಡ್ ಮಲಾನ್ ಸೆಮಿಫೈನಲ್ ಹಣಾಹಣಿಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ಶನಿವಾರದಂದು ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ಜಯಗಳಿಸಿದ ಸಂದರ್ಭದಲ್ಲಿ ತೊಡೆಸಂದು ಗಾಯದ ಕಾರಣ ಮಲಾನ್ ರನ್ ಚೇಸ್‌ನಲ್ಲಿ ಬ್ಯಾಟ್ ಮಾಡಿರಲಿಲ್ಲ. ಫಿಲ್ ಸಾಲ್ಟ್ ಮಲಾನ್‌ ಸ್ಥಾನದಲ್ಲಿ ಕಾಣಿಸಿಕೊಳ್ಳಬಹುದಾಗಿದೆ. ಏಕೆಂದರೆ ಅವರು ತಂಡದಲ್ಲಿ ಲಭ್ಯವಿರುವ ಏಕೈಕ ಬ್ಯಾಟರ್ ಆಗಿದ್ದಾರೆ. ಆಡುವ ಹನ್ನೊಂದರ ಬಳಗದಲ್ಲಿ ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್ ಅಥವಾ ಟೈಮಲ್ ಮಿಲ್ಸ್‌ನಂತಹ ವಿಭಿನ್ನ ಬೌಲಿಂಗ್ ಆಯ್ಕೆಯ ಸಾಧ್ಯತೆಯೂ ಇದೆ.
ಹೀಗಾದಲ್ಲಿ ಇದುವರೆಗಿನ ಸ್ಪರ್ಧೆಯ ಉದ್ದಕ್ಕೂ ಇಂಗ್ಲೆಂಡ್ ತೋರಿದ ʼಬ್ಯಾಟಿಂಗ್ ಹೆವಿʼ ತಂತ್ರದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿ ಬರಬಹುದು. ತಂಡ ಏಳು ಪರಿಪೂರ್ಣ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ ಗಳೊಂದಿಗೆ ಆಡುತ್ತಿದೆ. ಟಿ 20 ವಿಶ್ವ ಶ್ರೇಯಾಂಕದಲ್ಲಿ ಮಲಾನ್ ಇಂಗ್ಲೆಂಡ್‌ನ ಅಗ್ರ ಶ್ರೇಯಾಂಕದ ಬ್ಯಾಟರ್ ಆಗಿದ್ದಾರೆ, ಆದರೆ ವಿಶ್ವಕಪ್ ನಲ್ಲಿ ಮಾತ್ರ ಪ್ರದರ್ಶನ ಸಾಧಾರಣವಾಗಿದೆ. ಗುಂಪು ಹಂತದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 37 ಎಸೆತಗಳಲ್ಲಿ 35 ರನ್ ಗಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.  “ಅವರು ನಮ್ಮ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರ ಗಾಯ ಗಂಭೀರವಾದಂತೆ ತೋರುತ್ತದೆ” ಎಂದು ತಂಡದ ಉಪನಾಯಕ ಮೋಯಿನ್‌ ಅಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!