ಕೋತಿಗಳಿಗೂ ಹಬ್ಬಿದ ಸಾಮಾಜಿಕ ಜಾಲತಾಣದ ಹುಚ್ಚು! ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಮಾರ್ಟ್‌ಫೋನ್‌ಗಳು ಕೈಗೆ ಬಂದದ್ದೇ ತಡ ಸಾಮಾಜಿಕ ಜಾಲತಾಣ ಎಂಬ ವೇದಿಕೆ ಎಲ್ಲರನ್ನು ಹಾಳುಮಾಡಿದೆ. ಮೊದಲು ಎಲ್ಲರೂ ಒಂದೆಡೆ ಕೂತು ಹರಟೆ ಕಾರ್ಯಕ್ರಮ, ನಾಟಕ, ಕಥೆ ಕೇಳುವುದು ಇಂತಹದ್ದಿತ್ತು. ಇದೀಗ ಮನೆಯಲ್ಲಿರುವ ಎಲ್ಲರ ಕೈನಲ್ಲೂ ಸ್ಮಾರ್ಟ್‌ ಫೋನ್‌ ಬಂದು ಒಬ್ಬರಿಗೊಬ್ಬರು ಮಾತನಾಡದೇ ಸೋಷಿಯಲ್ ಮೀಡಿಯಾದಲ್ಲಿ ಮುಳುಗಿರುತ್ತಾರೆ. ಇದೀಗ ಈ ರೋಗ ಮನಷ್ಯರಿಗಷ್ಟೇ ಅಲ್ಲದೆ ಮಂಗಗಳಿಗೂ ಬಾಧಿಸಿದೆ.

ಒಂದು ಹಳೆಯ ಗಾದೆ ಇದೆ ಮಂಗನಿಂದ ಮಾನವ ಎಂದು. ಆದರೆ ಈ ಸೋಷಿಯಲ್ ಮೀಡಿಯಾ ಹುಚ್ಚು ಮನುಷ್ಯರಿಂದ ಮಂಗಗಳಿಗೂ ಹಬ್ಬಿದೆ. ಇತ್ತೀಚೆಗೆ ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದು ಹಳೆಯ ವಿಡಿಯೋ ಆದರೂ ಈಗಿರುವ ಪರಿಸ್ಥಿತಗೆ ಟ್ರೆಂಡ್‌ ಆಗುತ್ತಿದೆ.  ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಮೊಬೈಲ್ ಅನ್ನು ಎರಡು ಕೋತಿಗಳ ಮುಂದೆ ಇಟ್ಟಿದ್ದಾನೆ. ಅದರಲ್ಲಿ ತೆರೆದಿರುವ ಸಾಮಾಜಿಕ ಜಾಲತಾಣಗಳ ಪೋಸ್ಟ್ ಗಳನ್ನು ಕೋತಿಗಳು ಸ್ಕ್ರೋಲ್ ಮಾಡುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!