Tuesday, March 28, 2023

Latest Posts

VIRAL VIDEO| ಶಾಲೆ ಮೈದಾನದಲ್ಲಿ ಬಾಲಕಿಯಿಂದ ಸಿಕ್ಸರ್‌ಗಳ ಸುರಿಮಳೆ: ಮೆಚ್ಚಿಕೊಂಡ ಸಚಿನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೃತ್ತಿಪರ ಕ್ರಿಕೆಟಿಗರಂತೆ ಶಾಲಾ ಬಾಲಕಿ ಹೊಡೆತಗಳು ಎಲ್ಲರನ್ನೂ ಬಾಯ್ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿವೆ. ಲೆಜೆಂಡರಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡಾ ʻಕ್ಯಾ ಬಾತ್ ಹೈʼ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಕೂಡ ಹುಡುಗಿಯನ್ನು ಹೊಗಳಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅನೇಕರು ಈ ಬಾಲಕಿಯನ್ನು ಟಿ20 ಸೂಪರ್‌ಸ್ಟಾರ್ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಹೋಲಿಸುತ್ತಿದ್ದಾರೆ. ಆಕೆಯ ಹೊಡೆತಗಳು ಸೂರ್ಯಕುಮಾರ್ ಯಾದವ್ ಅವರಂತೆಯೇ ಇವೆ ಅಂತಿದಾರೆ.

“ಈ ಹುಡುಗಿಯ ಕ್ರಿಕೆಟ್ ಕೌಶಲ್ಯ ಮತ್ತು ಆಟದ ಮೇಲಿರುವ ಅವಳ ಉತ್ಸಾಹದಿಂದ ನಾನು ಆಶ್ಚರ್ಯಚಕಿತನಾಗಿದ್ದೆ. ಭಾರತೀಯ ಮಹಿಳಾ ಕ್ರಿಕೆಟ್ ಭವಿಷ್ಯ ಸುರಕ್ಷಿತ ಕೈಯಲ್ಲಿದೆ. ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸೋಣ. ಅವರು ಭವಿಷ್ಯದಲ್ಲಿ ಗೇಮ್ ಚೇಂಜರ್ ಆಗುತ್ತಾರೆ ಎಂದು ಜಯ್ ಶಾ ಹೇಳಿದ್ದಾರೆ. ಆ ಹುಡುಗಿಯ ಬ್ಯಾಟಿಂಗ್ ನೋಡಿ ಎಂಜಾಯ್ ಮಾಡಿದೆ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್‌ ಮಾಡಿದ್ದಾರೆ.

ಬಾಲಕಿಯು ಶಾಲೆಯಲ್ಲಿ ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ, ಆಕೆ ಸಿಕ್ಸರ್‌ ಹೊಡೆಯೋದನ್ನು ಯಾರೋ ಒಬ್ಬರು ವಿಡಿಯೋ ಮಾಡಿದ್ದಾರೆ. ಆಕೆ ಯಾರೆಂದು ಪತ್ತೆ ಹಚ್ಚಿ ಕ್ರಿಕೆಟ್ ತರಬೇತಿ ನೀಡಲಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!