VIRAL VIDEO| ನಮ್ಮ ತಂಟೆಗೆ ಬಂದ್ರೆ ಸುಮ್ಮನಿರಲ್ಲ, ಹುಲಿ ಆದ್ರೂ ಸರಿ..ಸಿಂಹ ಆದ್ರೂ ಸರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹುಲಿ ಕಣ್ಣಿಟ್ರೆ ಹೇಗಿರುತ್ತದೆ ಎಂದು ಹೇಳಬೇಕಾಗಿಲ್ಲ, ಒಮ್ಮೆ ಗುರಿ ನಿಗದಿಯಾದರೆ ಅದನ್ನು ಬೆನ್ನಟ್ಟಿ ಬೇಟೆಯಾಡುವವರೆಗೂ ಬಿಡುವುದಿಲ್ಲ. ಕಾಡುಗಳಲ್ಲಿ ಆಹಾರ ಸಿಗದೆ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳು ಗ್ರಾಮಗಳಿಗೆ ಬಂದು ತೊಂದರೆ ಉಂಟು ಮಾಡುತ್ತಿರುವುದು ಸಹಜವಾಗಿದೆ.

ಅಂತೆಯೇ ಹುಲಿಯೊಂದು ಕರುವನ್ನು ಅಟ್ಟಿಸಿಕೊಂಡು ಹೋಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ವೀಡಿಯೋದಲ್ಲಿ ಹುಲಿಯೊಂದು ದನಗಳ ಹಿಂಡನ್ನು ಅಟ್ಟಿಸಿಕೊಂಡು ಹೋಗುತ್ತಿದ್ದು, ಕರುವನ್ನು ಗುರಿಯಾಗಿಸಿಕೊಂಡ ಹುಲಿಗೆ ಹಸು ಬೆದರಿಸಿದ ದೃಶ್ಯ ಕಾಣಬಹುದು.

ಗುಂಪಿನಲಲಿದ್ದಾಗ ಹುಲಿ ಆದ್ರೇನು. ಸಿಂಹವಾದರೇನು ತಮ್ಮ ಗುಂಪಿನವುಗಳನ್ನು ಯಾವುದೇ ಪ್ರಾಣಿಗಳಾಗಲೀ ಬಿಟ್ಟುಕೊಡುವುದಿಲ್ಲ. ಕರು ಅಟ್ಟಾಡಿಸುತ್ತಿದ್ದ ಹುಲಿಯನ್ನು ಹಸುವೊಂದು ಹೆದರಿಸಿ ಓಡಿಸಿದೆ. ಕರು ಯಾಔಉದೇ ಅಪಾಯವಿಲ್ಲದೆ ಬದುಕುಳಿದಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ ನಂದಾ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!