ಭೀಕರ ಪ್ರವಾಹಕ್ಕೆ ಗ್ರಾಮ ಜಲಾವೃತ: ರಿವೀಲ್‌ ಆಯ್ತು ಬಾಹುಬಲಿ ಸಿನಿಮಾ ದೃಶ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ತೆಲಂಗಾಣದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಪೆದ್ದಪಲ್ಲಿ ಜಿಲ್ಲೆಯ ಮಂಥನಿ ಗ್ರಾಮ ಮಳೆ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ. ಮನುಷ್ಯನ ಕುತ್ತಿಗೆ ಮಟ್ಟದವರೆಗೂ ನೀರು ನಿಂತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಈ ಸಂದರ್ಭದಲ್ಲಿ ಹಸುಗೂಸನ್ನು ಸಾಗಿಸಿದ ದೃಶ್ಯ ಇದೀಗ ವೈರಲ್‌ ಆಗಿದೆ. ಬಾಹುಬಲಿ ದಿ ಬಿಗಿನಿಂಗ್‌ ಸಿನಿಮಾದಲ್ಲಿ ರಮ್ಯಕೃಷ್ಣ ಅಮರೇಂದ್ರ ಬಾಹುಬಲಿಯನ್ನು ಕಾಪಾಡಲು ನದಿಯಲ್ಲಿ ಮಗುವನ್ನು ಎತ್ತಿದ ರೀತಿಯ ಹಾಗೆಯೇ ಇಲ್ಲಿ ಒಬ್ಬ ಅಜ್ಜ ಬುಟ್ಟಿಯಲ್ಲಿ ಮೂರು ತಿಂಗಳ ಮಗುವನ್ನು ಹೊತ್ತೊಯ್ದಿದ್ದಾರೆ.

ಭಾರೀ ಪ್ರವಾಹದಿಂದಾಗಿ ಬಾಹುಬಲಿ ಸಿನಿಮಾ ಸ್ಟೈಲ್ ನಲ್ಲಿ ಮಗುವನ್ನು ಹೊತ್ತೊಯ್ದ ವಿಡಿಯೋವನ್ನು ಪತ್ರಕರ್ತರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದೇ ವೇಳೆ ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶದ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಹಲವೆಡೆ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!