ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂಗಡಿಯಲ್ಲಿದ್ದ ಒಂಟಿ ಮಹಿಳೆ ಮೇಲೆ ಕಳ್ಳನೊಬ್ಬ ದಾಳಿ ಮಾಡಿರುವ ಘಟನೆ ಟರ್ಕಿಯಲ್ಲಿ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸ್ವೀಟ್ ಶಾಪ್ನ ಗ್ಲಾಸ್ ಶುಚಿ ಮಾಡುವ ವೇಳೆ ಕಳ್ಳನೊಬ್ಬ ಕತ್ತಿ ಹಿಡಿದು ಒಳನುಗ್ಗಿ ಕದಿಯಲು ಯತ್ನಿಸಿದ್ದಾನೆ. ಆಗ ಕೈಯಲ್ಲಿದ್ದ ಬಟ್ಟೆಯಿಂದಲೇ ಆತನನ್ನು ಹೊಡೆದು ಸಹಾಯಕ್ಕಾಗಿ ಚೀರಾಡಿದ್ದಾಳೆ.
ಕೂಡಲೇ ಆಚೆಯಿಂದ ಮತ್ತೊಬ್ಬ ವ್ಯಕ್ತಿ ಸಹಾಯಕ್ಕಾಗಿ ಧಾವಿಸಿದ ತಕ್ಷಣ ಕಳ್ಳ ಅಂಗಡಿಯಿಂದ ಕಾಲ್ಕತ್ತಿದ್ದಾನೆ. ಈ ವಿಡಿಯೋದಲ್ಲಿ ಒಂಟಿ ಮಹಿಲೆ ಕೈಯಲ್ಲಿ ಚಾಕು ಇದ್ದರೂ ಧೈರ್ಯವಾಗಿ ಎದುರಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತವಾಗಿದೆ.
Latife Peker, a turkish baker in the Netherlands, chased the thief, using a cleaning cloth in self-defense; don't underestimate the power of cleaning cloth👏 pic.twitter.com/4togC4JH5M
— Tansu YEĞEN (@TansuYegen) July 28, 2022