ಹೊಸ ವಿಲ್ಲಾ ಖರೀದಿಸಿದ ವಿರಾಟ್​​ ಕೊಹ್ಲಿ: ಇದರ ಬೆಲೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

 ಟೀಂ ಇಂಡಿಯಾದ ಆಟಗಾರ ವಿರಾಟ್​​ ಕೊಹ್ಲಿ ಅವಾಸ್ ಲಿವಿಂಗ್‌ನಲ್ಲಿ ಕೊಹ್ಲಿ ಹೊಸ ವಿಲ್ಲಾ ಖರೀದಿಸಿದ್ದಾರೆ .

ಇದೀಗ ಇದರ ಬೆಲೆಯ ಕುರಿತು ಚರ್ಚೆಯಾಗುತ್ತಿದ್ದೆ. ಇದಕ್ಕೆ ಸುಮಾರು 6 ಕೋಟಿ ಯಾಗಿದ್ದು, ಈ ವಿಲ್ಲಾ 2000 ಚದರ ಅಡಿ ವಿಸ್ತೀರ್ಣ ಹೊಂದಿದೆ.ಹೊಸ ವಿಲ್ಲಾದ ನೋಂದಣಿ ಶುಲ್ಕಕ್ಕಾಗಿ ಕೊಹ್ಲಿ 36 ಲಕ್ಷ ರೂ. ಪಾವತಿಸಿದ್ದು, ಈ ಹೊಸ ವಿಲ್ಲಾದಲ್ಲಿ ಸರಿಸುಮಾರು 400 ಚದರ ಅಡಿ ಅಳತೆಯ ದೊಡ್ಡ ಈಜುಕೊಳವಿದೆ.

ಕೊಹ್ಲಿಯ ವಿಲ್ಲಾದ ಬಗ್ಗೆ ಮಾಹಿತಿ ನೀಡಿರುವ ಅವಾಸ್ ಲಿವಿಂಗ್​ನ ಕಾನೂನು ಸಲಹೆಗಾರ ಅಡ್ವೊಕೇಟ್ ಮಹೇಶ್ ಮ್ಹಾತ್ರೆ, ಕೊಹ್ಲಿ ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ 4 ಟೆಸ್ಟ್ ಸರಣಿಯಲ್ಲಿ ನಿರತರಾಗಿರುವುದರಿಂದ ಅವರ ಸಹೋದರ ವಿಕಾಸ್ ಕೊಹ್ಲಿ ನೋಂದಣಿಯಂತಹ ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅಲಿಬಾಗ್‌ನಲ್ಲಿಯೇ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಫಾರ್ಮ್ ಹೌಸ್ ಖರೀದಿಸಿದ್ದರು. ಖರೀದಿಗಾಗಿ ಕೊಹ್ಲಿ ಸುಮಾರು 19.24 ಕೋಟಿ ರೂಪಾಯಿ ಖರ್ಚು ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!