ವಿರಾಟ್ ಕೊಹ್ಲಿ ಹೊಟೇಲ್ ರೂಂನ ವಿಡಿಯೋ ಲೀಕ್, ಸ್ವಲ್ಪವೂ ಪ್ರೈವೆಸಿ ನೀಡೋದಿಲ್ವಾ? ಕೊಹ್ಲಿ ಗರಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿ ತಾರೆಯರು ಹಾಗೂ ಕ್ರಿಡಾಪಟುಗಳಿಗೆ ಸಿಕ್ಕಾಪಟ್ಟೆ ಫ್ಯಾನ್‌ಬೇಸ್ ಇರುತ್ತದೆ. ಇದೇ ಸಾಲಿನಲ್ಲಿ ವಿರಾಟ್ ಕೊಹ್ಲಿ ಕೂಡ ಸೇರುತ್ತಾರೆ. ವಿರಾಟ್ ಕೊಹ್ಲಿ ಮನೆ ಹೇಗಿದೆ, ಅವರು ಉಳಿಯುವ ಹೊಟೇಲ್ ರೂಂ ಹೇಗಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಆದರೆ ಅವರೂ ನಮ್ಮಂತೆ ಮನುಷ್ಯರು ಅವರಿಗೂ ಪ್ರೈವೆಸಿ ಬೇಕು ಎನ್ನುವುದನ್ನು ಅಭಿಮಾನಿಗಳು ಮರೆತಂತಿದೆ.

ವಿರಾಟ್ ಕೊಹ್ಲಿ ಉಳಿದುಕೊಂಡಿರುವ ಹೊಟೇಲ್ ರೂಂನ ವಿಡಿಯೋ ಒಂದು ವೈರಲ್ ಆಗಿದೆ. ವಿರಾಟ್ ಟೇಬಲ್ ಮೇಲೆ ಏನೆಲ್ಲಾ ಇದೆ, ಅವರು ಯಾವ ರೀತಿ ಪ್ರೋಟೀನ್ ಶೇಕ್ ಕುಡಿಯುತ್ತಾರೆ, ರೂಂ ಹೇಗಿದೆ ಎಲ್ಲವೂ ಈ ವಿಡಿಯೋದಲ್ಲಿ ಕಾಣುತ್ತದೆ.

ಇದಕ್ಕೆ ವಿರಾಟ್ ಕೊಹ್ಲಿ ಉತ್ತರ ನೀಡಿದ್ದು, ನಿಮಗೆ ನಮ್ಮನ್ನು ಭೇಟಿ ಮಾಡುವುದು ಖುಷಿಯ ವಿಷಯ, ಇದು ನನಗೆ ಕೂಡ ಖುಷಿ ನೀಡುತ್ತದೆ. ಆದರೆ ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನ್ನು ನಾನು ಒಪ್ಪುವುದಿಲ್ಲ, ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ಹೊಟೇಲ್ ರೂಂನಿಂದ ಹೊರಗೆ ಕಾಲಿಟ್ಟಾಗಿನಿಂದ ನನಗೆ ಪ್ರೈವೆಸಿ ಇರುವುದಿಲ್ಲ. ನನ್ನದೇ ಹೊಟೇಲ್ ರೂಂನಲ್ಲಿ ನನಗೆ ಪ್ರೈವೆಸಿ ಇಲ್ಲ ಎಂದರೆ? ಇನ್ನೆಲ್ಲಿ ಪ್ರೈವೆಸಿ ಕೊಡುತ್ತೀರಿ ಎಂದು ನಿರೀಕ್ಷೆ ಮಾಡಬೇಕು? ನೀವೇ ಹೇಳಿ. ಇದು ನನಗೆ ನಿಜವಾಗಿಯೂ ಇಷ್ಟವಾಗಿಲ್ಲ. ನಾಟ್ ಒಕೆ, ಮನುಷ್ಯರ ಖಾಸಗಿತನಕ್ಕೆ ಬೆಲೆ ಕೊಡಿ, ನಿಮಗೆ ಮನರಂಜನೆ ನೀಡುವ ವಸ್ತು ನಾನಲ್ಲ ಎಂದು ಹೇಳಿದ್ದಾರೆ.

https://www.instagram.com/reel/CkXVWI6g7Ff/?utm_source=ig_web_copy_link

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!