Monday, October 3, 2022

Latest Posts

ಕಿಂಗ್‌ ಫಾರ್ಮ್‌ಗೆ ಬಂದಾಯ್ತು.. ಹೇರ್‌ಸ್ಟೈಲ್‌ ಸಹ ಬದಲಾಯ್ತು.. ಹೊಸ ಲುಕ್‌ ನಲ್ಲಿ ಕಾಣಿಸಿಕೊಂಡ ಕೊಹ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ತಮ್ಮ ವೃತ್ತಿಜೀವನದ ಸಂಕಷ್ಟಕಾಲ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಈಗಷ್ಟೇ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ ಶತಕ ಸಿಡಿಸುವ ಮೂಲಕ ಫಾರ್ಮ್‌ಗೆ ಮರಳಿದ್ದಾರೆ. ಕೊಹ್ಲಿ ಹೊಸ ಲುಕ್‌ನೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಹೊಸ ಸವಾಲಿಗೆ ಸಜ್ಜಾಗಿದ್ದಾರೆ.
ಭಾನುವಾರ ಮೊಹಾಲಿಯಲ್ಲಿ ತಂಡವನ್ನು ಸೇರುವ ಮುನ್ನ ಕೊಹ್ಲಿ ಹೊಸ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದಾರೆ. ಕೊಹ್ಲಿ ಹೊಸ ಹೇರ್​ ಸ್ಟ್ರೈಲ್ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಯ ಕಾಮೆಂಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್ 4 ಪಂದ್ಯದಲ್ಲಿ ಕೊಹ್ಲಿ ತಮ್ಮ ಚೊಚ್ಚಲ ಟಿ20 ಶತಕವನ್ನು ಸಿಡಿಸುವ ಮೂಲಕ ಮೂರು ವರ್ಷಗಳಿಂದ ಕಾಡುತ್ತಿದ್ದ ಶತಕದ ಬರವನ್ನು ಕೊನೆಗೊಳಿಸಿದ್ದಾರೆ. ಕೊಹ್ಲಿ 5 ಪಂದ್ಯಗಳಲ್ಲಿ 276 ರನ್ ಗಳಿಸುವ ಮೂಲಕ ಟೂರ್ನಿಯ ದ್ವಿತೀಯ ಗರಿಷ್ಠ ಸ್ಕೋರರ್ ಆಗಿ ಪಂದ್ಯಾವಳಿಯನ್ನು ಮುಗಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಅತ್ಯುತ್ತಮ ಸ್ಟ್ರೈಕ್​ ರೇಟ್ ಹೊಂದಿರುವ ಕೊಹ್ಲಿ ಈ ಸರಣಿಯಲ್ಲೂ ಅಬ್ಬರಿಸುವ ಮೂಲಕ ಫಾರ್ಮ್‌ ಮುಂದುವರೆಸಿಕೊಂಡು ಹೋಗುವ ವಿಶ್ವಾಸದಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!