September 12, 2026
Saturday, September 12, 2026
spot_img

ಜಾಕೋಬ್‌ ಬೆಥೆಲ್‌ನ ಬಿಗ್‌ ಸಿಕ್ಸ್‌ ನೋಡಿ ಬಾಯಿಬಿಟ್ಟ ವಿರಾಟ್‌ ಕೊಹ್ಲಿ: ವಿಡಿಯೋ ಇಲ್ಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆಯಷ್ಟೇ ನಡೆದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸುಲಭವಾದ ಗೆಲುವನ್ನು ದಕ್ಕಿಸಿಕೊಂಡಿದೆ.

ಈ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್‌ ಬ್ಯಾಟರ್ ಜಾಕೋಬ್‌ ಬೆಥೆಲ್‌ ಅದ್ಭುತವಾದ ಸಿಕ್ಸ್‌ ಒಂದನ್ನು ಹೊಡೆದಿದ್ದಾರೆ. ಸಣ್ಣ ಇನ್ನಿಂಗ್ಸ್‌ ಆಡಿದ್ರೂ ಬೆಥೆಲ್‌ ಸೂಪರ್‌ ಇಂಪ್ರೆಶನ್‌ ನೀಡಿದ್ದಾರೆ. ಬೆಥೆಲ್‌ ಬಾರಿಸಿದ ಸಿಕ್ಸ್‌ಗೆ ಇಡೀ ಸ್ಟೇಡಿಯಂ ದಂಗಾಗಿದ್ದು, ವಿರಾಟ್‌ ಕೊಹ್ಲಿ ಕೂಡ ಬಾಯಿ ಬಿಟ್ಟುಕೊಂಡು ನೋಡಿದ್ದಾರೆ.

ಕೈಲ್‌ ಜೇಮಿಸನ್‌ ಡೆಲ್ಲಿ ಕ್ಯಾಪಿಟಲ್ಸ್‌ ಪರ ಮೂರನೇ ಓವರ್‌ನಲ್ಲಿ ಬೌಲಿಂಗ್‌ ಮಾಡಿದ್ರು. ಈ ಓವರ್‌ನಲ್ಲಿ ಜಾಕೋಬ್‌ ಬೆಥೆಲ್‌ 104 ಮೀಟರ್ ಉದ್ದದ ಸಿಕ್ಸ್ ಬಾರಿಸಿದ್ರು. ಇದು ಇಡೀ ಸ್ಟೇಡಿಯಂ ಬೆಥೆಲ್‌ನತ್ತ ನೋಡುವಂತೆ ಮಾಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !