ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಏಕದಿನ ಕ್ರಿಕೆಟ್ ನಲ್ಲಿ ಭಾರತದಲ್ಲಿ ನಡೆದ ಪಂದ್ಯಗಳ ಮೂಲಕ 5 ಸಾವಿರ ರನ್ ಗಳಿಸಿದ ಟೀಂ ಇಂಡಿಯಾದ ಎರಡನೇ ಬ್ಯಾಟರ್ ಎಂಬ ದಾಖಲೆಗೆ ವಿರಾಟ್ ಕೊಹ್ಲಿ ಭಾಜನರಾಗಿದ್ದಾರೆ.
ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 8 ರನ್ ಗೆ ಔಟ್ ಆದ ಕೊಹ್ಲಿ ಈ ನಡುವೆಯೂ ದಾಖಲೆ ಬರೆದಿದ್ದಾರೆ.
ಈ ಮ್ಯಾಚ್ ನಲ್ಲಿ ಬ್ಯಾಕ್ ಟು ಬ್ಯಾಕ್ 2 ಫೋರ್ ಭಾರಿಸಿ ಕ್ಯಾಚ್ ಔಟ್ ಆದ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ ಮೂಲಕ ಭಾರತದಲ್ಲಿ ಒಟ್ಟು 5 ಸಾವಿರ ರನ್ ಗಳಿಸಿದ ಟೀಂ ಇಂಡಿಯಾದ 2ನೇ ಬ್ಯಾಟರ್ ಆಗಿದ್ದಾರೆ.
ಇನ್ನು ಏಕದಿನ ಪಂದ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ ವಿಶ್ವದ 4ನೇ ಬ್ಯಾಟರ್ ಎಂಬ ದಾಖಲೇಯೂ ಇವರಿಗೆ ಸಲ್ಲಿದೆ. ಟೀಂ ಇಂಡಿಯಾದಲ್ಲಿ 5 ಸಾವಿರ ರನ್ ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.
ಸಚಿನ್ ಭಾರತದಲ್ಲಿ 6976 ರನ್ ಕಲೆಹಾಕುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.