September 27, 2026
Sunday, September 27, 2026
spot_img

ಲಂಡನ್ ಪಾರ್ಕ್‌ನಲ್ಲಿ ಮಗನ ಜತೆ ಕಾಲ ಕಳೆದ ವಿರಾಟ್ ಕೊಹ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ಕ್ಯೂಟ್ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ರಿಕೆಟ್ ಜಗತ್ತಿನ ರನ್ ಮಷಿನ್, ಟೀಮ್ ಇಂಡಿಯಾದ ತಾರೆ ವಿರಾಟ್ ಕೊಹ್ಲಿ ಲಂಡನ್‌ನ ಪಾರ್ಕ್‌ ಒಂದರಲ್ಲಿ ತಮ್ಮ ಪುಟ್ಟ ಮಗ ಅಕಾಯ್ ಜತೆ ಪ್ರೀತಿಯಿಂದ ಸಮಯ ಕಳೆಯುತ್ತಿರುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮಗನ ಮುದ್ದಾಟದಲ್ಲಿ ಮುಳುಗಿದ ಕಿಂಗ್ ಕೊಹ್ಲಿ

ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿರಾಟ್ ಕೊಹ್ಲಿ, ಸದ್ಯ ಕ್ರಿಕೆಟ್‌ನಿಂದ ಸಿಕ್ಕ ಬಿಡುವಿನ ವೇಳೆಯನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಲಂಡನ್‌ನ ಸುಂದರವಾದ ಪಾರ್ಕ್‌ನಲ್ಲಿ ವಿರಾಟ್, ಮಗ ಅಕಾಯ್‌ನನ್ನು ಎತ್ತಿಕೊಂಡು ಮುದ್ದಾಡುತ್ತಿರುವ ಹಾಗೂ ಮಗನ ನಗುವನ್ನು ಸವಿಯುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ತಂದೆ-ಮಗನ ಈ ಸುಂದರ ಬಂಧವನ್ನು ಕಂಡ ನೆಟ್ಟಿಗರು ” ಕ್ಯೂಟ್ ವಿಡಿಯೋ” ಎಂದು ಕಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಲಂಡನ್‌ನಲ್ಲಿ ನೆಲೆಸಿದ್ದಾರಾ ವಿರಾಟ್-ಅನುಷ್ಕಾ?

ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಮಗನ ಜನನದ ಬಳಿಕ   ಹೆಚ್ಚಾಗಿ ಲಂಡನ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಟಿ20 ವಿಶ್ವಕಪ್ ಮುಗಿದ ಬಳಿಕವೂ ವಿರಾಟ್ ನೇರವಾಗಿ ಲಂಡನ್‌ಗೆ ಹಾರಿದ್ದರು. ಕೊಹ್ಲಿ ಕುಟುಂಬವು ಸಾರ್ವಜನಿಕ ಲೈಮ್‌ಲೈಟ್‌ನಿಂದ ದೂರ ಉಳಿದು, ತಮ್ಮ ಮಕ್ಕಳಾದ ವಾಮಿಕಾ ಮತ್ತು ಅಕಾಯ್‌ಗೆ ಸಾಮಾನ್ಯ ಜೀವನ ನೀಡಲು ಲಂಡನ್‌ನಲ್ಲಿ ನೆಲೆಸಲು ಯೋಜಿಸುತ್ತಿದ್ದಾರೆ ಎಂಬ ಚರ್ಚೆಗಳು ಅಭಿಮಾನಿಗಳಲ್ಲಿ ಜೋರಾಗಿವೆ.

Must Read