Thursday, March 23, 2023

Latest Posts

ಅನುಷ್ಕಾ ತ್ಯಾಗದ ಮುಂದೆ ನಂದೇನು, ಪತ್ನಿಯನ್ನು ಹಾಡಿಹೊಗಳಿದ ವಿರಾಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಲವ್ ಸ್ಟೋರಿ ಗೊತ್ತಿಲ್ಲದವರಿಲ್ಲ, ಸಾರ್ವಜನಿಕವಾಗಿ ತಮ್ಮ ಲವ್ ಲೈಫ್ ಡಿಸ್ಕಸ್ ಮಾಡದ ಜೋಡಿ ಇದೀಗ ತಮ್ಮ ಪಾರ್ಟ್‌ನರ್ ಬಗ್ಗೆ ಮಾತನಾಡಿದ್ದಾರೆ.

ನನಗೆ ಅನುಷ್ಕಾ ಸ್ಫೂರ್ತಿಯ ಚಿಲುಮೆ, ಎಂಥದ್ದೇ ಕಷ್ಟ ಬಂದರೂ ಅವಳನ್ನು ನೋಡಿದರೆ ನನ್ನ ಕಷ್ಟಗಳೆಲ್ಲ ಸಣ್ಣದು ಎನಿಸುತ್ತದೆ. ಅವಳ ತಾಯಿ ವಿಷಯದಲ್ಲಿ ಆಕೆ ಮಾಡಿರುವ ತ್ಯಾಗಕ್ಕೆ ಬೆಲೆ ಕಟ್ಟೋದಕ್ಕೆ ಆಗೋದಿಲ್ಲ.

ಎಲ್ಲವನ್ನೂ ಸ್ವೀಕರಿಸುವ ಗುಣ ಅನುಷ್ಕಾದು. ನೀವು ಯಾರ ಜತೆಯಲ್ಲಾದರೂ ಪ್ರೀತಿಯಲ್ಲಿ ಬಿದ್ದರೆ, ಅವರ ಜೀವನದಿಂದ ಬೇಕಾದ ಅಂಶಗಳನ್ನು ಅಳವಡಿಸಿಕೊಂಡು ಬದಲಾವಣೆ ಮಾಡಿಕೊಳ್ತೇವೆ. ಅನುಷ್ಕಾ ಜೀವನವೇ ನನಗೆ ಸ್ಫೂರ್ತಿ ಎಂದು ವಿರಾಟ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!