September 28, 2026
Monday, September 28, 2026
spot_img

CINE | ಮದುವೆ ನಂತರ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿರೋಶ್‌ ಜೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮದುವೆಯ ನಂತರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಒಟ್ಟಾಗಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಡ್‌ ಅನಾರ್ಕಲಿ ಕುರ್ತಾದಲ್ಲಿ ರಶ್ಮಿಕಾ ಮಿಂಚುತ್ತಿದ್ದರೆ ವಿಜಯ್‌ ಕೂಡ ಸಿಲ್ವರ್‌ ಬಣ್ಣದ ಕೋ ಆರ್ಡ್‌ ಸೆಟ್‌ ಹಾಕಿದ್ದಾರೆ.

ರಶ್ಮಿಕಾ ವಿಜಯ್‌ ಎಂಟ್ರಿ ಕೊಡುತ್ತಿದ್ದಂತೆಯೇ ಪ್ಯಾಪಾರಝಿಗಳು ಹಾರೈಸಿದ್ದಾರೆ. ರಶ್ಮಿಕಾ ದೇವರಕೊಂಡ ಎಂದು ಕೂಗಿದ್ದಾರೆ. ರಶ್ಮಿಕಾ ಹಾಗೂ ವಿಜಯ್‌ ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಕೈಮುಗಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://www.instagram.com/reels/DVQbz7gjY2P



Must Read