ಮಗನಿಗೆ ಅಕಾಯ್ ಎಂದು ಹೆಸರಿಟ್ಟ ವಿರುಷ್ಕಾ, ಸೋಶಿಯಲ್ ಮೀಡಿಯಾ ತುಂಬಾ ‘ಅಕಾಯ್’ ಟ್ರೆಂಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲ ದಿನಗಳಿಂದ ಅನುಷ್ಕಾ-ವಿರಾಟ್ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುದ್ದಿಗಳು ಹರಿದಾಡಿದ್ದು, ಸ್ಟಾರ್ ಕಪಲ್ ಯಾವ ವಿಷಯಕ್ಕೂ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೀಗ ನಿನ್ನೆಯಷ್ಟೇ ವಿರಾಟ್ ಮಗನ ಆಗಮನದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಮಗುವಿಗೆ ಅಕಾಯ್ ಎಂದು ಹೆಸರಿಟ್ಟಿದ್ದು, ಅಕಾಯ್ ಅಂದರೇನು ಅಂತ ಜನ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾರೆ.

ಸದ್ಯ ಅಕಾಯ್ ಟ್ರೆಂಡಿಂಗ್‌ನಲ್ಲಿದ್ದು, ಇದರ ಅರ್ಥ ದೇಹವನ್ನೂ ಮೀರಿದವನು ಎಂದು, ಟರ್ಕಿಯಲ್ಲಿ ಅಕೆ ಎಂದರೆ ಚಂದ್ರ ಎಂದರ್ಥ.

ವಿರುಷ್ಕಾ ಪೋಸ್ಟ್‌ಗೆ ಸೆಲೆಬ್ರಿಟಿಗಳು ಲೈಕ್ ಹಾಗೂ ಕಮೆಂಟ್ ಮಾಡಿದ್ದು, ಒಂದೇ ಗಂಟೆಯಲ್ಲಿ ಕೋಟಿಗೂ ಅಧಿಕ ಮಂದಿ ಪೋಸ್ಟ್‌ನ್ನು ಲೈಕ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!