1000 ಗಿಡಗಳನ್ನ ನೆಡುವ ಮೂಲಕ ವಿಶೇಷವಾಗಿ ಮಗಳ ಬರ್ತಡೇ ಆಚರಿಸಿದ ಜೂಹಿ ಚಾವ್ಲಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೂಹಿ ಚಾವ್ಲಾ ಪುತ್ರಿ ಜಾಹ್ನವಿ ಮೆಹ್ತಾಗೆ ಈಗ 23 ವರ್ಷ. ಜಾನ್ವಿ ಮೆಹ್ತಾಗೆ ತನ್ನ ತಾಯಿಯಂತೆ ನಟಿಯಾಗಲು ಇಷ್ಟವಿರಲಿಲ್ಲ. ಈ ಕಾರಣಕ್ಕಾಗಿ, ಅವರು ಹೆಚ್ಚಾಗಿ ಸ್ಟಾರ್ ಮಕ್ಕಳ ಗುಂಪಿನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಈಗ ಅವರ ಜನ್ಮದಿನವನ್ನು ಅತ್ಯಂತ ಮಹತ್ವಪೂರ್ಣವಾಗಿ ಆಚರಿಸಲಾಗಿದೆ.

ನಟಿ ಜೂಹಿ ಚಾವ್ಲಾ ಅವರಿಗೆ ಪರಿಸರ ಕಾಳಜಿ ಇದೆ. ತನ್ನ ಹೆಣ್ಣು ಮಕ್ಕಳು ಮತ್ತು ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಸಿಗಲಿ ಎಂಬ ಉದ್ದೇಶದಿಂದ ಈ ಪುಣ್ಯ ಕಾರ್ಯವನ್ನು ಮಾಡಿದ್ದಾರೆ. ತನ್ನ ಮಗಳು ಜಾಹ್ನವಿ ಮೆಹ್ತಾ ಹುಟ್ಟುಹಬ್ಬದಂದು ಸಾವಿರ ಸಸಿಗಳನ್ನು ನೆಟ್ಟಿದ್ದೇನೆ ಎಂದು ಜೂಹಿ ಚಾವ್ಲಾ ಹೇಳಿದ್ದಾರೆ. ಅವರ ಈ ಕೆಲಸವನ್ನು ಅಭಿಮಾನಿಗಳು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!