ರಷ್ಯಾದ ಹಣಕಾಸು ಸಂಸ್ಥೆಗಳಿಗಿಲ್ಲ ವೀಸಾ, ಮಾಸ್ಟರ್‌ ಕಾರ್ಡ್‌ ಸೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲಿನ ದಾಳಿ ಖಂಡಿಸಿ ಅಮೆರಿಕ ಸಾಧ್ಯವಾಗುವ ಎಲ್ಲಾ ರೀತಿಯ ಆರ್ಥಿಕ, ರಾಜತಾಂತ್ರಿಕ ನಿರ್ಬಂಧಗಳನ್ನು ಘೋಷಿಸುತ್ತಿದೆ.
ಇದೀಗ ಅಮೆರಿಕ ಮೂಲಕ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ ಸಂಸ್ಥೆಗಳು ರಷ್ಯಾದಲ್ಲಿ ತಮ್ಮ ಸೇವೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದರಿಂದ ರಷ್ಯಾದಲ್ಲಿನ ಬ್ಯಾಂಕಿಂಗ್‌ ವ್ಯವಸ್ಥೆ ತೊಂದರೆಗೀಡಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾಹಿತಿ ನೀಡಿರುವ ವೀಸಾ ಸಂಸ್ಥೆ, ರಷ್ಯಾದೊಳಗಿನ ನಮ್ಮ ಎಲ್ಲಾ ಕಾರ್ಯಾಚರಣೆ ಹಾಗೂ ವಹಿವಾಟುಗಳನ್ನು ನಾವು ಸ್ಥಗಿತಗೊಳಿಸುತ್ತಿದ್ದೇವೆ. ರಷ್ಯಾದ ಹಣಕಾಸು ಸಂಸ್ಥೆಗಳಿಂದ ವಿತರಣೆಯಾದ ವೀಸಾ ಕಾರ್ಡ್​ಗಳು ದೇಶದ ಹೊರಗೆ ಹಾಗೂ ರಷ್ಯಾದ ಹೊರಗೆ ವಿತರಣೆಯಾದ ವೀಸಾ ಕಾರ್ಡ್​ಗಳು ರಷ್ಯಾದೊಳಗೆ ಕಾರ್ಯನಿರ್ವಹಣೆ ಮಾಡುವುದಿಲ್ಲ ಎಂದಿದೆ.
ಮಾಸ್ಟರ್‌ ಕಾರ್ಡ್‌ ಹಾಗೂ ವೀಸಾ ಕಾರ್ಡ್‌ ನಿರ್ಬಂಧದ ಬಗ್ಗೆ ಪ್ರತಿಕ್ರಿಯಿಸಿದ ರಷ್ಯಾದ ಸರ್ಕಾರಿ ಸಾಮ್ಯದ ಬ್ಯಾಂಕ್‌ ಸ್ಬರ್‌ ಬ್ಯಾಂಕ್‌, ರಷ್ಯಾದೊಳಗೆ ತಮ್ಮ ಕಾರ್ಡ್‌ ಗಳ ಸೇವೆಯನ್ನು ಸ್ಥಗಿತಗೊಳಿಸಿರುವುದು ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆಗೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!