ರಷ್ಯಾಕ್ಕೆ ನಿರ್ಬಂಧಗಳ ಬಿಸಿ: ಆಪಲ್‌, ಮೈಕ್ರೋಸಾಫ್ಟ್‌ ಬಳಿಕ ಈಗ ರಫ್ತು ನಿಲ್ಲಿಸಿದ ಸ್ಯಾಮ್‌ ಸಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನಪ್ರಿಯ ಸ್ಮಾರ್ಟ್‌ ಫೋನ್‌ ತಯಾರಕ ಸಂಸ್ಥೆ ಸ್ಯಾಮ್‌ ಸಂಗ್‌ ಎಲೆಕ್ಟ್ರಾನಿಕ್ಸ್‌ ಉಕ್ರೇನ್‌ ದಾಳಿಯನ್ನು ಖಂಡಿಸಿ ರಷ್ಯಾಕ್ಕೆ ತನ್ನ ಉತ್ಪನ್ನಗಳ ರಫ್ತಿಗೆ ನಿರ್ಬಂಧ ಹೇರಿದೆ.
ಉಕ್ರೇನ್‌ ಮೇಲೆ ರಷ್ಯಾದ ದಾಳಿ ವಿರೋಧಿಸಿದ ದಕ್ಷಿಣ ಕೊರಿಯಾ ಮೂಲದ ಈ ಸ್ಯಾಮ್‌ ಸಂಗ್‌ ಸಂಸ್ಥೆ ಕೂಡ ಆಪಲ್‌, ಮೈಕ್ರೋಸಾಫ್ಟ್‌ ಸಂಸ್ಥೆಗಳ ಪಟ್ಟಿ ಸೇರಿದೆ.
ಇನ್ನು ಸ್ಯಾಮ್‌ ಸಂಗ್‌ ಚಿಪ್‌ಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ಗಳವರೆಗಿನ ಎಲ್ಲಾ ಸ್ಯಾಮ್‌ಸಂಗ್ ಉತ್ಪನ್ನಗಳನ್ನು ರಷ್ಯಾಕ್ಕೆ ರಫ್ತು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಮೈಕ್ರೋಸಾಫ್ಟ್ ಶುಕ್ರವಾರ ಉಕ್ರೇನ್‌ ಮೇಲೆ ರಷ್ಯಾದ ಆಕ್ರಮಣ ಅಪ್ರಚೋದಿತ ಮತ್ತು ಕಾನೂನುಬಾಹಿರವಾಗಿದೆ ಎಂದು ಖಂಡಿಸಿದೆ. ರಷ್ಯಾದಲ್ಲಿ ಎಲ್ಲಾ ಹೊಸ ಉತ್ಪನ್ನಗಳು ಮತ್ತು ಸೇವೆಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!