ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶಾಖಪಟ್ಟಣದಿಂದ ಸಿಕಂದರಾಬಾದ್‌ಗೆ ಹೋಗಬೇಕಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಗುರುವಾರ ಬೆಳಿಗ್ಗೆ 5:45 ಕ್ಕೆ ವಿಶಾಖಪಟ್ಟಣದಿಂದ ಹೊರಡಬೇಕಿತ್ತು. ಆದರೆ ರೈಲು ರದ್ದಾದ ಕಾರಣ ಪರ್ಯಾಯವಾಗಿ ಮತ್ತೊಂದು ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.
ಪರ್ಯಾಯ ರೈಲು ಬೆಳಗ್ಗೆ 7 ಗಂಟೆಗೆ ವಿಶಾಖಪಟ್ಟಣದಿಂದ ಸಿಕಂದರಾಬಾದ್‌ಗೆ ಹೊರಟಿತು. ಸಂಪೂರ್ಣ ಮಾಹಿತಿಗಾಗಿ ಆಯಾ ರೈಲು ನಿಲ್ದಾಣಗಳಲ್ಲಿರುವ ವಿಚಾರಣಾ ಕೇಂದ್ರಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ. ವಂದೇ ಭಾರತ್ ರೈಲಿಗೆ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಈ ರೈಲಿಗೆ ಹತ್ತಬೇಕು. ಪ್ರಯಾಣಿಕರಿಗೆ ಆಗಿರುವ ತೊಂದರೆಗೆ ರೈಲ್ವೆ ಇಲಾಖೆ ವಿಷಾದ ವ್ಯಕ್ತಪಡಿಸಿದೆ.