5.66 ಶೇಕಡಾಗೆ ಕುಸಿದ ಚಿಲ್ಲರೆ ಹಣದುಬ್ಬರ: 15 ತಿಂಗಳ ಕನಿಷ್ಟ ಮಟ್ಟ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದ ಚಿಲ್ಲರೆ ಹಣದುಬ್ಬರವು ಮಾರ್ಚ್‌ ತಿಂಗಳ ಹಣದುಬ್ಬರವು 5.66 ಶೇಕಡಾಗೆ ಇಳಿದಿದೆ. ಇದು ಕಳೆದ 15 ತಿಂಗಳಲ್ಲಿಯೇ ಕನಿಷ್ಟ ಪ್ರಮಾಣವಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಚಿಲ್ಲರೆ ಹಣದುಬ್ಬರವು 6.44 ಶೇಕಡಾದಷ್ಟು ದಾಖಲಾಗಿತ್ತು ಮತ್ತು ಕಳೆದ ವರ್ಷದ ಇದೇ ಅವಧಿಯಲ್ಲಿ 6.95 ಶೇಕಡಾದಷ್ಟಿತ್ತು.

ತರಕಾರಿ ಬೆಲೆಗಳು ಕಡಿಮೆಯಾದ ಕಾರಣ ಆಹಾರದ ವಸ್ತುಗಳ ಮೇಲಿನ ಹಣದುಬ್ಬರವು 4.79 ಶೇಕಡಾಗೆ ಇಳಿದಿದೆ. ಇದು ಚಿಲ್ಲರೆ ಹಣದುಬ್ಬರದ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ ಹಣದುಬ್ಬರ ಮಟ್ಟವು ಭಾರತೀಯ ರಿಸರ್ವ್ ಬ್ಯಾಂಕ್ (RBI)ನ ಗುರಿ ವ್ಯಾಪ್ತಿಯಲ್ಲಿದೆ.

ಆಹಾರ ಪದಾರ್ಥಗಳ ಪೈಕಿ, ಏಕದಳ ಹಣದುಬ್ಬರವು ಮಾರ್ಚ್‌ನಲ್ಲಿ 15.27 ಶೇ.ದಷ್ಟು ಹೆಚ್ಚಿದ್ದು, ಹಾಲು ಮತ್ತು ಹಾಲಿನ ವಸ್ತುಗಳ ಬೆಲೆ ಬೆಳವಣಿಗೆಯು 9.31 ಶೇ.ದಷ್ಟಿದೆ. ಮತ್ತೊಂದೆಡೆ, ತರಕಾರಿ ಹಣದುಬ್ಬರವು 8.51ಶೇ.ದಷ್ಟು ಕುಗ್ಗಿದೆ ಎಂದು ಡೇಟಾ ತೋರಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!