ತಮಿಳು ನಟ ವಿಶಾಲ್‌ಗೆ ಗಾಯ: ಮತ್ತೊಮ್ಮೆ ಶೂಟಿಂಗ್‌ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೆಲ ನಾಯಕರು ಚಲನ ಚಿತ್ರಗಳಲ್ಲಿನ ಆಕ್ಷನ್ ಸೀಕ್ವೆನ್ಸ್‌ಗಳಿಗಾಗಿ ನಿಜವಾದ ರಿಸ್ಕ್ ತೆಗೆದುಕೊಳ್ಳುತ್ತಾರೆ. ಅಂತಹ ನಾಯಕರಲ್ಲಿ ತಮಿಳು ನಟ ವಿಶಾಲ್ ಕೂಡಾ ಒಬ್ಬರು. ಬಹುತೇಕ ಫೈಟ್ ಸೀಕ್ವೆನ್ಸ್ ಗಳಲ್ಲಿ ವಿಶಾಲ್ ಡ್ಯೂಪ್ ಇಲ್ಲದೆ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತವೆ. ಇಂತಹ ಆಕ್ಷನ್ ಸೀಕ್ವೆನ್ಸ್‌ಗಳಿಂದ ವಿಶಾಲ್ ಈಗಾಗಲೇ ಹಲವು ಬಾರಿ ಗಾಯಗೊಂಡಿದ್ದಾರೆ.

ಇದೀಗ ಮತ್ತೊಮ್ಮೆ ಗಾಯಗೊಂಡು ಚಿತ್ರದ ಶೂಟಿಂಗ್‌ ಸ್ಥಗಿತಗೊಂಡಿದೆ. ವಿಶಾಲ್ ಸದ್ಯ ಲಾಠಿ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದಾರೆ.  ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದ್ದು, ಈ ಹಿಂದೆಯೂ ಶೂಟಿಂಗ್ ವೇಳೆ ವಿಶಾಲ್ ಗಾಯಗೊಂಡಿದ್ದರು. ಹಾಗಾಗಿ ಕೆಲ ದಿನಗಳ ಕಾಲ ಚಿತ್ರೀಕರಣ ಸ್ಥಗಿತಗೊಂಡಿತ್ತು. ಬಳಿಕ ಇದೇ ಚಿತ್ರದ ಶೂಟಿಂಗ್ ವೇಳೆ ವಿಶಾಲ್ ಮತ್ತೊಮ್ಮೆ ಗಂಭೀರವಾಗಿ ಗಾಯಗೊಂಡಿದ್ದರು. ಇದೀಗ ‘ಲಾಠಿ’ ಚಿತ್ರದ ಕ್ಲೈಮ್ಯಾಕ್ಸ್ ಫೈಟ್ ದೃಶ್ಯಗಳ ಚಿತ್ರೀಕರಣದ ವೇಳೆ ಅಪಘಾತದಲ್ಲಿ ವಿಶಾಲ್ ಗಾಯಗೊಂಡಿದ್ದರಿಂದ ಚಿತ್ರದ ಶೂಟಿಂಗ್ ಮುಂದಕ್ಕೆ ಹೋಗಿದೆ. ವಿಶಾಲ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!