Tuesday, February 27, 2024

ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಛತ್ತೀಸ್‌ಗಢದ ಮುಂದಿನ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.ಅಧಿಕೃತ ಘೋಷಣೆ ಬಾಕಿ ಉಳಿದಿದೆ.

ಸರ್ವಾನುಮತದಿಂದ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ವೀಕ್ಷರು ಸಭೆಯಲ್ಲಿ ವಿಷ್ಣುದೇವ್ ಅವರ ಹೆಸರನ್ನು ಸೂಚಿಸಿದ್ದಾರೆ. ಬಿಜೆಪಿ ವೀಕ್ಷಕರ ಪ್ರಸ್ತಾಪಕ್ಕೆ ಸರ್ವಾನುಮತದಿಂದ ಅಂಗೀಕಾರ ದೊರೆತಿದೆ.
ಸಾಯಿ ಬಿಜೆಪಿಯ ಬುಡಕಟ್ಟು ಮುಖ. ಅವರು ಮಾಜಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವರೂ ಆಗಿದ್ದಾರೆ.

ಈ ಸಭೆಯಲ್ಲಿ ಕೇಂದ್ರ ಸಚಿವರಾದ ಸರ್ಬಾನಂದ್ ಸೋನೋವಾಲ್, ಅರ್ಜುನ್ ಮುಂಡಾ ಮತ್ತು ದುಷ್ಯಂತ್ ಕುಮಾರ್ ಗೌತಮ್ ಅವರಲ್ಲದೇ ಛತ್ತೀಸ್​ಗಢ ಬಿಜೆಪಿ ಉಸ್ತುವಾರಿ ಓಂ ಮಾಥುರ್ ಕೂಡ ಉಪಸ್ಥಿತರಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!