ಕೆಎಸ್ಸಾರ್ಟಿಸಿಗೆ ಭಾಗ್ಯದ ಬಾಗಿಲು ತೆರೆದ ವಿಷು: ಬರೋಬ್ಬರಿ 8.57 ಕೋಟಿ ರೂ. ಆದಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಷು ಹಬ್ಬ ಕೇರಳ ರಸ್ತೆ ಸಾಗಿಗೆ ಸಂಸ್ಥೆಗೆ ದಾಖಲೆಯ ಭರ್ಜರಿ ಲಾಭ ತಂದುಕೊಟ್ಟಿದೆ.

ಈ ಬಗ್ಗೆ ಸಂಸ್ಥೆ ಅಂಕಿಅಂಶ ಬಿಡುಗಡೆ ಮಾಡಿದ್ದು, ಸೋಮವಾರ ಒಂದೇ ದಿನ ಸಂಸ್ಥೆಗೆ ಬರೋಬ್ಬರಿ 8.57 ಕೋಟಿ ರೂ. ಆದಾಯ ಬಂದಿದೆ.

ಸೋಮವಾರದಂದು ಒಟ್ಟು 4,324 ಬಸ್‌ಗಳು ಸೇವೆಯಲ್ಲಿದ್ದವು. ಈ ಪೈಕಿ 4179 ಬಸ್‌ಗಳಲ್ಲಿ 8.57 ಕೋಟಿ ರೂ. ಆದಾಯ ಬಂದಿದೆ. ಸಂಸ್ಥೆ ಕಳೆದ ವರ್ಷ ಇದೇ ದಿನದಂದು 8.30 ಕೋಟಿ ರೂ. ಗಳಿಸಿತ್ತು. ಈ ದಾಖಲೆಯನ್ನು ಸಂಸ್ಥೆ ಈ ಬಾರಿ ಮುರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!