ವಿಶ್ವಗುರು ಭಾರತದ ಕಲ್ಪನೆಗೆ ಮತ್ತಷ್ಟು ಬಲ ನೀಡಿದ ಬಜೆಟ್: ಚಂದು ಪಾಟೀಲ್

ಹೊಸದಿಗಂತ ವರದಿ, ಕಲಬುರಗಿ:

ಸಮಗ್ರ ಭಾರತದ ದೂರ ದೃಷ್ಟಿಯ ನೇತಾರ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ವಿಕಸಿತ ಭಾರತವಾಗಿ ಹೊರಹೊಮ್ಮತಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಮಧ್ಯಂತರ ಬಜೆಟ್ ಭವಿಷ್ಯದ ಸದೃಢ ವಿಶ್ವಗುರು ಭಾರತದ ಕಲ್ಪನೆಗೆ ಮತ್ತಷ್ಟು ಬಲ ನೀಡಿದೆ ಎಂದು ಭಾರತೀಯ ಜನತಾ ಪಕ್ಷದ ಕಲಬುರಗಿ ಮಹಾನಗರ ಘಟಕದ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ತಿಳಿಸಿದ್ದಾರೆ.

ಲಖ್ಪತಿ ದಿದಿ ಯೋಜನೆಯ ಮೂಲಕ ಸ್ತ್ರೀ ಸಬಲೀಕರಣದ ಮುನ್ಸೂಚನೆ ನೀಡಿದ್ದು ನ್ಯಾನೋ ಡಿಎಪಿ ಗೆ ಬಲ ನೀಡಿ ರೈತರ ಕಣ್ಣೀರು ಒರೆಸುವ ಪ್ರಯತ್ನಕ್ಕೆ ಈ ಬಜೆಟ್ ನಾಂದಿ ಹಾಡಿದೆ. ಸದೃಢ ಭಾರತಕ್ಕೆ ಬಲ ನೀಡಲು ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದು, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆ ದುಪ್ಪಟ್ಟು ಆಗಲಿದೆ ಎಂದರು.

ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಮೂರನೇ ಅವಧಿಯ ಕೇಂದ್ರ ಸರಕಾರದಲ್ಲಿ ಮತ್ತೊಮ್ಮೆ ಬಜೆಟ್ ಮಂಡಿಸಿ ದೇಶದ ಅಭಿವೃದ್ಧಿಗೆ ಬಲ ನೀಡುವ ಕಾರ್ಯಕ್ಕೆ ಈ ಮಧ್ಯಂತರ ಬಜೆಟ್ ಬುನಾದಿ ಮತ್ತು ಮಾರ್ಗದರ್ಶಿಯಾಗಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!