Wednesday, February 28, 2024

ವಿಕಸಿತ ಭಾರತಕ್ಕೆ ಶಕ್ತಿ ತುಂಬುವ ಬಜೆಟ್: ಮಾಜಿ ಸಚಿವ ಮುರುಗೇಶ ನಿರಾಣಿ

ಹೊಸದಿಗಂತ ವರದಿ, ಬೀಳಗಿ :

ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ಜೊತೆಗೆ ವಿಕಸಿತ ಭಾರತಕ್ಕೆ ಶಕ್ತಿ ತುಂಬುವ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ , ಮಾಜಿ ಸಚಿವ ಮುರುಗೇಶ ನಿರಾಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತ ವಿಶ್ವದ ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಯಲು ಸಹಕಾರಿಯಾಗುವ ಈ ಬಜೆಟ್ ಶ್ರೀಸಾಮಾನ್ಯನ ಬದುಕಿಗೆ ಭದ್ರತೆ ತುಂಬುತ್ತದೆ. ಅನ್ನ, ನೀರು, ವಿದ್ಯುತ್, ಮೂಲಭೂತ ಸೌಕರ್ಯ, ನವೀಕರಿಸಬಹುದಾದ ಇಂಧನ, ಯುವಶಕ್ತಿಯ ಸಬಲೀಕರಣದ ಜೊತೆಗೆ ರೈತರಿಗೆ ಚೈತನ್ಯ ತುಂಬುವಲ್ಲಿ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಯಶಸ್ವಿಯಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!