ಹೊಸದಿಗಂತ ವರದಿ, ಸಿರುಗುಪ್ಪ:
ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ಕೆಂಚನಗುಡ್ಡ ಗ್ರಾಮದ ಶ್ರೀ ವಸುಧೇಂದ್ರ ತೀರ್ಥರ ಸನ್ನಿಧಾನಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಮಂಗಳವಾರ ಸಂಜೆ ಭೇಟಿ ನೀಡಿದರು.
ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಶ್ರೀ ವಸುಧೇಂದ್ರ ತೀರ್ಥರ ಆರಾಧನೆ ಹಿನ್ನೆಲೆ, ಚಾತುರ್ಮಾಸ ಬಳಿಕ ದರ್ಶನಕ್ಕಾಗಿ ಶ್ರೀಗಳು ಸಂಜೆ ಭೇಟಿ ನೀಡಿದರು.
ನಂತರ ವಿವಿಧ ಮುಖಂಡರೊಂದಿಗೆ ಆರಾಧನೆ ಪೂರ್ವಭಾವಿಯಾಗಿ ಶ್ರೀಮಠದ ಆವರಣದಲ್ಲಿ ಚರ್ಚೆ ನಡೆಸಿ, ಅದ್ದೂರಿಯಾಗಿ ಆರಾಧನೆಯನ್ನು ಆಚರಿಸೋಣ ಎಲ್ಲರ ಸಹಕಾರ ಇರಲಿ ಎಂದರು.
ನಗರದ ವಿಜಯ ವಿಠಲ ನಗರದ ಶ್ರೀ ಆಂಜನೇಯ ಸ್ವಾಮಿ ದೇಗುಲದ ಜೀರ್ಣೋದ್ಧಾರಕ್ಕೆ ಸಂಬoಧಿಸಿದಂತೆ ಮುಂದಿನ ತಿಂಗಳು ಸಿರುಗುಪ್ಪ ನಗರಕ್ಕೆ ಬರುವೆ, ಶ್ರೀ ವಸುಧೇಂದ್ರ ತೀರ್ಥರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸೋಣ, ಎಲ್ಲರ ಸಹಕಾರ ಇರಲಿ ಎಂದರು.
ನಂತರ ಸ್ಥಳದಲ್ಲಿದ್ದ ಭಕ್ತರಿಗೆ ಶ್ರೀಗಳು ಫಲ ಮಂತ್ರಾಕ್ಷತೆ ವಿತರಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಪಂ.ರಾಜಾ ಎಸ್.ಗಿರಿ ಆಚಾರ್ಯ, ಸಿರುಗುಪ್ಪ ತಾಲೂಕು ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಸಂಜಯ್ ಆಚಾರ್ಯ, ನಗರಸಭೆ ಮಾಜಿ ಸದಸ್ಯ ವೆಂಕಟರಾಮ ರೆಡ್ಡಿ, ಗೋಪಾಲ ರೆಡ್ಡಿ, ಆರ್ಯ ವೈಶ್ಯ ಸಮಾಜದ ಹಿರಿಯರಾದ ಎಚ್. ಜೆ.ಹನುಮಂತಯ್ಯ ಶೆಟ್ಟಿ, ನಾಗರಾಜ್ ಶೆಟ್ಟಿ, ಶ್ರೀನಿವಾಸ್ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.