Tuesday, March 28, 2023

Latest Posts

ಮಳಖೇಡ ಉತ್ತರಾಧಿ ಮಠಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ಗಾಲಿ ಜನಾರ್ಧನ ರೆಡ್ಡಿ

ಹೊಸ ದಿಗಂತ ವರದಿ, ಕಲಬುರಗಿ:

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಸುತ್ತಿರುವ ಹಿನ್ನೆಲೆಯಲ್ಲಿ ದೇವರ ದರುಶನ ಪಡೆಯಲೆಂದೆ ಮಾಜಿ ಸಚಿವ ಗಾಲಿ ಜನಾಧ೯ನ್ ರೆಡ್ಡಿ ಅವರಿಂದ ಟೆಂಪಲ್ ರನ್ ಶುರುವಾಗಿದೆ.

ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ್,ನ ಉತ್ತರಾಧಿ ಮಠದ ಜಯತೀರ್ಥ,ರ ಮೂಲ ಬೃಂದಾವನಕ್ಕೆ ಗಾಲಿ ಜನಾಧ೯ನ ರೆಡ್ಡಿ ಗುರುವಾರ ಸಂಜೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ಕನಾ೯ಟಕ ಪ್ರಗತಿ ಪಕ್ಷ ಸಂಸ್ಥಾಪಕರಾಗಿರುವ ಗಾಲಿ ಜನಾಧ೯ನ ರೆಡ್ಡಿ ಇಂದು ಸೇಡಂ ಪಟ್ಟಣದಲ್ಲಿ ಆಯೋಜನೆ ಮಾಡಲಾದ ಸಮಾವೇಶದಲ್ಲಿ ಭಾಗವಹಿಸಲು ಕಲಬುರಗಿ ಜಿಲ್ಲೆಗೆ ಆಗಮಿಸಿದ್ದಾರೆ.

ಸಮಾವೇಶದಲ್ಲಿ ಪಾಲ್ಗೊಳ್ಳುವ ಮುಂಚೆ ಮಳಖೇಡದಲ್ಲಿನ ಉತ್ತರಾಧಿ ಮಠಕ್ಕೆ ಭೇಟಿ ನೀಡಿ ದೇವರ ದಶ೯ನ ಪಡೆದುಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!