‘ಆಸ್ಕರ್​ 2023’ ಸ್ಪರ್ಧೆಗೆ ಮತ ಚಲಾಯಿಸಿದ ತಮಿಳು ನಟ ಸೂರ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾರ್ಚ್​ 13ರ  ಲಾಸ್​ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ 95ನೇ ಸಾಲಿನ ಆಸ್ಕರ್​ ಅವಾರ್ಡ್ಸ್​ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಈ ಬಾರಿ ಭಾರತದ ಸಿನಿಮಾಗಳು 3 ವಿಭಾಗದಲ್ಲಿ ನಾಮಿನೇಟ್​ ಆಗಿರುವುದರಿಂದ ಯಾರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿಯಲಿದೆ ಎಂಬುದುನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಈ ನಡುವೆ ತಮಿಳಿನ ಖ್ಯಾತ ನಟ ಸೂರ್ಯ ಅವರು ಆಸ್ಕರ್​ ಸ್ಪರ್ಧೆಗೆ ತಮ್ಮ ಮತ ಚಲಾಯಿಸಿದ್ದಾರೆ. ಆಸ್ಕರ್​ ಪ್ರಶಸ್ತಿಯ ಕಮಿಟಿಯಲ್ಲಿ ಸದಸ್ಯತ್ವ ಹೊಂದಿರುವ ದಕ್ಷಿಣ ಭಾರತದ ಏಕೈಕ ನಟ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.

ತಾವು ಆಸ್ಕರ್​ ಸ್ಪರ್ಧೆಗೆ ವೋಟ್​ ಮಾಡಿರುವ ವಿಷಯವನ್ನು ​ಟ್ವಿಟರ್​ ಮೂಲಕ ಸೂರ್ಯ ಖಚಿತಪಡಿಸಿದ್ದಾರೆ. ಅದಕ್ಕೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಸೂರ್ಯ ಅವರು ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆ ಪರಿಗಣಿಸಿ ಅವರಿಗೆ ‘ಅಕಾಡೆಮಿ ಆಫ್​ ಮೋಷನ್​ ಪಿಕ್ಚರ್ಸ್​ ಆರ್ಟ್ಸ್​ ಆಯಂಡ್​ ಸೈನ್ಸಸ್​’ ಸದಸ್ಯತ್ವ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!