ದಿ ಕಾಶ್ಮೀರ್‌ ಫೈಲ್ಸ್‌ ಪಾರ್ಟ್‌- 2 ಘೋಷಿಸಿದ ವಿವೇಕ್‌ ಅಗ್ನಿಹೋತ್ರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಹತ್ಯೆ, ಹಿಂಸಾಚಾರದ ಕುರಿತ ‘ದಿ ಕಾಶ್ಮೀರ್‌ ಫೈಲ್ಸ್’‌ ಸಿನಿಮಾ ದೇಶಾದ್ಯಂತ ಹಿಟ್‌ ಅದ ಬೆನ್ನಲ್ಲೇ ಇದೀಗ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ದಿ ಕಾಶ್ಮೀರ್‌ ಫೈಲ್ಸ್‌ ಪಾರ್ಟ್‌ 2 ಘೋಷಿಸಿದ್ದಾರೆ.

ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌ ಆಫ್‌ ಇಂಡಿಯಾ (IFFI)ದ ಜ್ಯೂರಿ, ಇಸ್ರೇಲ್‌ ಸಿನಿಮಾ ನಿರ್ದೇಶಕ ನಡಾವ್‌ ಲ್ಯಾಪಿಡ್‌ ಅವರು ದಿ ಕಾಶ್ಮೀರ್‌ ಫೈಲ್ಸ್‌ ಸಿನಿಮಾವನ್ನು ‘ಪ್ರಪಗಂಡ’ ಇರುವ ಸಿನಿಮಾ ಎಂದು ಟೀಕಿಸಿದ ಬೆನ್ನಲ್ಲೇ ಅಗ್ನಿಹೋತ್ರಿ ಅವರು, ‘ದಿ ಕಾಶ್ಮೀರ್‌ ಫೈಲ್ಸ್:‌ ಅನ್‌ರಿಪೋರ್ಟೆಡ್‌’ ಎಂಬ ಸಿನಿಮಾ ಘೋಷಿಸಿದ್ದಾರೆ.

ಕಾಶ್ಮೀರದಲ್ಲಿ ಪಂಡಿತರ ಮೇಲಾದ ಹಿಂಸಾಚಾರದ ಸಂಪೂರ್ಣ ಚಿತ್ರ ಇದರಲ್ಲಿ ಇರಲಿದೆ ಎಂದು ಅಗ್ನಿಹೋತ್ರಿ ಹೇಳಿದ್ದಾರೆ. ಆದರೆ, ಯಾವಾಗ ಸಿನಿಮಾ ಸೆಟ್ಟೇರುತ್ತದೆ, ಪಾತ್ರಧಾರಿಗಳು ಸೇರಿ ಹೆಚ್ಚಿನ ಮಾಹಿತಿಯನ್ನು ಅವರು ನೀಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!