Wednesday, December 7, 2022

Latest Posts

ಕರಣ್ ಜೋಹರ್ ಗೆ ತಿರುಗೇಟು ಕೊಟ್ಟ ವಿವೇಕ್ ಅಗ್ನಿಹೋತ್ರಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿಥ್ ಕರಣ್ ಶೋ ನಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರು, ನಟಿಯರು ಕಾರ್ಯಕ್ರಮದಲ್ಲಿ ಭಾಗಿ ತಮ್ಮ ಲೈಫ್ ಬಗ್ಗೆ ಮಾತನಾಡಿ ಖುಷಿ ಪಡುತ್ತಾರೆ. ಆದರೆ ಇದೀಗ ಕಾಶ್ಮೀರಿ ಫೈಲ್ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಆಕ್ರೋಶ ವ್ಯಕ್ತಪಡಿಸಿದ್ದು, ನಾನು ಆ ಕಾರ್ಯಕ್ರಮಕ್ಕೆ ಹೋಗೋದು ಇಲ್ಲ ಅವರು ಕರೆಯುವುದೂ ಇಲ್ಲ ಎಂದಿದ್ದಾರೆ.

ಅದೊಂದು ಸೆಕ್ಸ್ ಆಧಾರಿತ ಕಾರ್ಯಕ್ರಮದ ರೀತಿ ಬಿಂಬಿತವಾಗುತ್ತಿದೆ. ಲವ್, ಬ್ರೇಕ್ ಅಪ್, ಸೆಕ್ಸ್ ಇಷ್ಟು ವಿಚಾರ ಇಟ್ಟುಕೊಂಡೇ ಮಾತುಕತೆ ಮಾಡಲಾಗುತ್ತದೆ. ಇಂಥಹ ಕಾರ್ಯಕ್ರಮಕ್ಕೆ ನಾನು ಹೋಗುವುದಿಲ್ಲ. ನಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡೋಕೆ ಅಲ್ಲಿಗೆ ಯಾಕೆ ಹೋಗಬೇಕು ಎಂದು ಕಿಡಿ ಕಾರಿದ್ದಾರೆ. ಕರಣ್ ಜೋಹರ್ ಕೇಳುವ ಪ್ರಶ್ನೆಗಳಿಗೆ ಆಕ್ಷೇಪ ವ್ಯಕ್ತಪಡಿಸಿರುವ ಅಗ್ನಿಹೋತ್ರಿ ಅಲ್ಲಿಗೆ ಹೋಗುವವರ ಮೇಲೂ ಅನುಮಾನ ಇದೆ ಎಂದಿದ್ದಾರೆ.

ಅಲ್ಲಿಗೆ ಹೋದರೆ ನಮ್ಮ ಮರ್ಯಾದೆ ನಾವೇ ತೆಗೆದುಕೊಂಡಂತೆ ಎಂದಿರುವ ಅವರು, ನಾನು ಸೆಕ್ಸ್ ಅನ್ನು ನನ್ನ ಹೆಂಡತಿ ಜೊತೆ ಎಂಜಾಯ್ ಮಾಡ್ತೀನಿ. ಕರಣ್ ಜೋಹರ್ ತರಹ ಅಲ್ಲ ಎಂದಿದ್ದಾರೆ. ನನಗೆ ಮಾಡಲು ತುಂಬಾ ಕೆಲಸ ಇದೆ. ಅದನ್ನು ಮಾಡ್ತೀನಿ ಎಂದು ಟಾಂಗ್ ಕೊಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!