‘ಕಾಶ್ಮೀರ್ ಫೈಲ್ಸ್ ಕಸ’ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಕೊಟ್ರು ಉತ್ತರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಲಿವುಡ್ ನಿರ್ದೇಶಕ ಸಯಿದ್ ಅಖ್ತರ್ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಕಸಕ್ಕೆ ಹೋಲಿಸಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಇದೀಗ ಇದಕ್ಕೆ ಟ್ವಿಟ್ಟರ್ ಮೂಲಕ ಉತ್ತರಿಸಿರುವ ವಿವೇಕ್ ಅಗ್ನಿಹೋತ್ರಿ, ‘ಸಯಿದ್ ಅಖ್ತರ್ ಸರ್, ನಮಸ್ಕಾರ್. ದೆಹಲಿ ಫೈಲ್ಸ್ ಮುಗಿದ ನಂತರ ಮತ್ತೆ ಭೇಟಿ ಆಗೋಣ’ ಎಂದಷ್ಟೇ ಹೇಳಿ ಬಿಟ್ಟಿದ್ದಾರೆ.

ಇತ್ತೀಚಿಗಷ್ಟೆ ಸಂದರ್ಶನದಲ್ಲಿ ನಿರ್ದೇಶಕ ಸಯೀದ್ ಅಖ್ತರ್ ಮಿರ್ಜಾ, ‘ನನಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ಗಾರ್ಬೇಜ್. ಹಾಗಂತ ಕಾಶ್ಮೀರಿ ಪಂಡಿತರ ವಿಚಾರವೇ ಗಾರ್ಬೇಜ್ ಅಂತ ಅಲ್ಲ. ಕಾಶ್ಮೀರಿ ಪಂಡಿತರ ಘಟನೆ ನಿಜ. ಕಾಶ್ಮೀರಿ ಹಿಂದುಗಳಿಗೆ ಮಾತ್ರವಲ್ಲ. ಮುಸ್ಲಿಮರೂ ನರಕ ಅನುಭವಿಸಿದ್ದಾರೆ. ಗುಪ್ತಚರ ಸಂಸ್ಥೆಗಳ ಕುತಂತ್ರಗಳು, ರಾಷ್ಟ್ರೀಯ ಹಿತಾಸಕ್ತಿಗಳು ಎಂದು ಕರೆಸಿಕೊಳ್ಳುವ ರಾಷ್ಟ್ರೀಯವಾದಿಗಳ ಕತಂತ್ರದ ಬಲೆಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಲ್ಲಿ ಮುಖ್ಯ ವಿಷಯವೆಂದರೆ ಪಕ್ಷಗಳನ್ನು ತೆಗೆದುಕೊಳ್ಳಬಾರದು. ಮನುಷ್ಯರಾಗಿರಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ’ ಎಂದು ಹೇಳಿದ್ದರು.

ಈ ಸಿನಿಮಾದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಲೇ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!