ಫಿಫಾ ವಿಶ್ವಕಪ್ ಗೆದ್ದ ಮೆಸ್ಸಿ ಬಳಗಕ್ಕೆ ತವರಿನಲ್ಲಿ ಸಿಕ್ಕಿತು ಅದ್ದೂರಿ ಸ್ವಾಗತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫಿಫಾ ವಿಶ್ವಕಪ್ ಫೈನಲ್ ಗೆದ್ದು ಬೀಗಿದ ಅರ್ಜೇಂಟಿನಾ ತಂಡಕ್ಕೆ ವಿಶ್ವದೆಲ್ಲೆಡೆ ಅಪಾರ ಅಭಿನಂದನೆ ಸಿಗುತ್ತಿದ್ದು, ತಮ್ಮ ತವರಿನಲ್ಲೂ ಅದ್ದೂರಿ ಸ್ವಾಗತ ಸಿಕ್ಕಿದೆ.

ನಾಯಕ ಲಿಯೊನಲ್ ಮೆಸ್ಸಿ ಅವರ ಅದ್ಭುತ ಆಟಕ್ಕೆ ಬೆರಗಾದ ಕ್ರೀಡಾ ಅಭಿಮಾನಿಗಳು , ಫಿಫಾ ಟೂರ್ನಿಯನ್ನು ಗೆದ್ದು ಟ್ರೋಫಿ ಎತ್ತಿಹಿಡಿದಾಗ, ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರೂ ಖುಷಿಯಲ್ಲಿ ತೇಲಾಡಿದರು.

 

ಅರ್ಜೇಂಟಿನಾ ತಂಡದ ಆಟಗಾರರು ತಮ್ಮ ತವರಿನ ಬೀದಿಯಲ್ಲಿ ತೆರೆದ ಬಸ್​ನಲ್ಲಿ ಮೆರವಣಿಗೆ ನಡೆಸಿದರು. ಇವರನ್ನು ಸ್ವಾಗತಿಸಲು ಕಿಲೋ ಮೀಟರ್​ನಷ್ಟು ಉದ್ದಕ್ಕೆ ಜನರು ಸಾಲಾಗಿ ನಿಂತಿದ್ದರು. ಎಲ್ಲ ಕಟ್ಟಡಗಳ ಮೇಲೂ ಆರ್ಜೆಂಟೀನಾದ ಬೃಹತ್‌ ಜೆರ್ಸಿ, ಎಲ್ಲರ ಮೈಮೇಲೂ ಆರ್ಜೆಂಟೀನಾದ ಫ‌ುಟ್‌ಬಾಲ್‌ ದಿರಿಸು, ಕೈಯಲ್ಲಿ ರಾಷ್ಟ್ರಧ್ವಜ ಕ್ರಿಸ್‌ಮಸ್‌ಗೂ ಮೊದಲೇ ಕಂಡುಬಂದ ಈ ಸಂಭ್ರಮದ ವಾತಾವರಣ ಕಂಡುಬಂತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!