ಭಾರತದಲ್ಲಿ ಬ್ರ್ಯಾಂಡ್ ವಿಸ್ತರಿಸಲು ಬರೋಬ್ಬರಿ 1,100 ಕೋಟಿ ಹೂಡಿಕೆ ರೂ. ಮಾಡ್ತಿದೆ ವಿವೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತವು ಎಲೆಕ್ಟ್ರಾನಿಕ್‌ ಉತ್ಪಾದನಾ ಕ್ಷೇತ್ರದಲ್ಲಿ ವೇಗವಾಗಿ ಮುನ್ನುಗ್ಗುತ್ತಿದ್ದು ಇದಕ್ಕೆ ಪೂರಕವಾಗಿ ಚೀನಾ ಮೂಲದ ಮೊಬೈಲ್‌ ತಯಾರಕ ಕಂಪನಿ ವಿವೋ ಭಾರತದಲ್ಲಿ ತನ್ನ ಬ್ರ್ಯಾಂಡ್‌ ವಿಸ್ತರಿಸಲು ಯೋಜಿಸುತ್ತಿದ್ದು ಬರೋಬ್ಬರಿ 1,100 ಕೋಟಿ ರೂ. ಹೂಡಿಕೆ ಮಾಡಲಿದೆ.

ಈ ವರ್ಷ ಗ್ರೇಟರ್‌ ನೋಯ್ಡಾದಲ್ಲಿ ಹೊಸದಾಗಿ 169 ಎಕರೆ ವಿಸ್ತಾರ ಪ್ರದೇಶದಲ್ಲಿ ಹೊಸ ಉತ್ಪಾದನಾ ಘಟಕವನ್ನು ತೆರೆಯಲು ವಿವೋ ಯೋಜಿಸುತ್ತಿದ್ದು 2024ರ ವೇಳೆಗೆ ಈ ಉತ್ಪದನಾ ಘಟಕ ಕಾರ್ಯನಿರ್ವಹಿಸಲಿದೆ ಎಂದು ಕಂಪನಿಯ ಇಂಡಿಯಾ ಬ್ರ್ಯಾಂಡ್ ಸ್ಟ್ರಾಟಜಿ ಹೆಡ್ ಯೋಗೇಂದ್ರ ಶ್ರೀರಾಮುಲ ಹೇಳಿದ್ದಾರೆ ಎಂದು ಲೈವ್‌ ಮಿಂಟ್‌ ವರದಿ ಮಾಡಿದೆ.

“ಭಾರತದಲ್ಲಿನ ನಮ್ಮ ಉತ್ಪಾದನಾ ಮಾನದಂಡಗಳು ಜಾಗತಿಕ ಮಾನದಂಡಗಳನ್ನು ಪೂರೈಸುತ್ತವೆ ಮತ್ತು ಪ್ರಪಂಚದ ಯಾವುದೇ ಭಾಗದಿಂದ ಬೇಡಿಕೆಗಳನ್ನು ಪೂರೈಸುವ ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ. ನಾವು 60+ ದೇಶಗಳು ಮತ್ತು ಪ್ರದೇಶಗಳಲ್ಲಿ ಮತ್ತು ಬೇಡಿಕೆ ಇರುವಲ್ಲೆಲ್ಲಾ ಸಾಧನಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ, ”ಎಂದು ಅವರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!